ಕಾಸರಗೋಡು: ಮಕ್ಕಳ ಮೇಲಿನ ದೌರ್ಜನ್ಯ-ಕಾನೂನು ಸಂರಕ್ಷಣೆ ಎಂಬ ವಿಷಯದಲ್ಲಿ ಜನಜಾಗೃತಿ ವಿಚಾರ ಸಂಕಿರಣ ಕಸರಗೋಡಿನಲ್ಲಿ ಜರುಗಿತು. ಕಾಸರಗೋಡು ಜಿಲ್ಲಾ ಚೈಲ್ಡ್ ವೆಲ್ ಫೇರ್ ಸಮಿತಿ, ಬಳಾಲ್ ಗ್ರಾಮ ಪಂಚಾಯಿತಿ, ಕೇರಳ ರಿಪೆÇೀರ್ಟರ್ಸ್ ಮೀಡಿಯಾ ಪರ್ಸನ್ಸ್ ಯೂನಿಯನ್ ಜಂಟಿ ವತಿಯಿಂದ ಸಮಾರಂಭ ಜರುಗಿತು.
ರಾಜ್ಯ ಮಕ್ಕಳ ಹಕ್ಕು ಆಯೋಗ ಸದಸ್ಯೆ ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಭವಿಷ್ಯದ ಭರವಸೆಯಾಗಿರುವ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜೆ ಮತ್ತು ಹೊಣೆಗಾರಿಕೆಯೊಂದಿಗೆ ನಡೆದುಕೊಳ್ಳುವುದರ ಜತೆಗೆ ಅವರ ಸಮಸ್ಯೆ ಪರಿಹಾರಕ್ಕೆ ಸಮಾಜ ಯತ್ನಿಸಬೇಕು. ಮಕ್ಕಳ ಹಕ್ಕು ಆಯೋಗ ಈ ನಿಟ್ಟಿನಲ್ಲಿ ತನ್ನ ಕೊಡುಗೆ ನೀಡುತ್ತಾ ಬರುತ್ತಿರುವುದಾಗಿ ತಿಳಿಸಿದರು.
'ಮಕ್ಕಳು ಮತ್ತು ಕಾನೂನು'ಎಂಬ ವಿಷಯದಲ್ಲಿ ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ, 'ಶಿಶು ಸೌಹಾರ್ದ ಪಂಚಾಯಿತಿ'ಎಂಬ ವಿಷಯದಲ್ಲಿ ಮಕ್ಕಳ ಹಕ್ಕು ಆಯೋಗ ಸದಸ್ಯ ಸಿ.ವಿಜಯಕುಮಾರ್, 'ಜಿಲ್ಲಾ ಮಟ್ಟದ ಶಿಶು ಸಂರಕ್ಷಣೆ ವ್ಯವಸ್ಥೆಗಳು'ಎಂಬ ವಿಷಯದಲ್ಲಿ ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು ತರಗತಿ ನಡೆಸಿದರು.
ಬಳಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಕಟ್ಟಕಯಂ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜುವೆನಲ್ ಜಸ್ಟಿಸ್ ಮಂಡಳಿ ಸದಸ್ಯ ನ್ಯಾಯವಾದಿ ವಿ.ಮೋಹನ್ ಕುಮಾರ್, ಜಿಲ್ಲಾ ಚೈಲ್ಡ್ ವೆಲ್ ಫೇರ್ ಸಮಿತಿ ಸದಸ್ಯೆ, ನ್ಯಾಯವಾದಿ ಪಿ.ರಜಿತಾ, ಕಾಸರಗೊಡು ಚೈಲ್ಡ್ ಲೈನ್ ಜಿಲ್ಲಾ ಸಂಚಾಲಕ ಅನೀಷ್ ಜೋಸ್, ಕೇರಳ ರಿಪೆÇೀರ್ಟರ್ಸ್ ಮೀಡಿಯಾ ಕಾಸರಗೋಡು ಜಿಲ್ಲಾ ಅಧ್ಯಕ್ಷ ಟಿ.ಕೆ.ನಾರಾಯಣನ್, ಬಳಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಂ. ರಾದಾಮಣಿ ಮೊದಲಾದವರು ಉಪಸ್ಥಿತರಿದ್ದರು.





