HEALTH TIPS

ಮ್ಯಾನ್ಮಾರ್: ಸ್ಟೇಟ್ ಕೌನ್ಸಿಲರ್ ಆಂಗ್ ಸ್ಯಾನ್ ಸೂಕಿ ಬಂಧನ, ದೇಶದಲ್ಲಿ ಸೇನಾ ದಂಗೆ ಏಳುವ ಭೀತಿ

       ನೈಪಿಟಾವ್: ಮ್ಯಾನ್ಮಾರ್ ನಲ್ಲಿ ಸೋಮವಾರ ಸೇನಾ ದಂಗೆಯೆದ್ದಿದೆ. ಮ್ಯಾನ್ಮಾರ್ ನ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಮುಖ್ಯಸ್ಥೆ ಸ್ಟೇಟ್ ಕೌನ್ಸಿಲರ್ (ಪ್ರಧಾನಿ ಹುದ್ದೆಗೆ ಸಮನಾದ ಹುದ್ದೆ) ಆಂಗ್ ಸ್ಯಾನ್ ಸೂಕಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.

       ಅಷ್ಟೇ ಅಲ್ಲದೆ ದೇಶದ ರಾಜಧಾನಿ ನೈಪಿಟಾವ್ ನ ಎಲ್ಲಾ ಸಂವಹನ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಫೋನ್ ಮತ್ತು ಇಂಟರ್ನೆಟ್ ಸಂಪರ್ಕಗಳು ಕಡಿತಗೊಂಡಿದೆ. ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಾರ್ಟಿಯ ನಾಯಕರು, ಕಾರ್ಯಕರ್ತರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

      ಕಳೆದ ವರ್ಷ ನವೆಂಬರ್ ನಲ್ಲಿ  ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಬಳಿಕ ಸಂಸತ್ತಿನ ಮೊದಲ ಅಧಿವೇಶನಕ್ಕೆ ಇಂದು ರಾಜಧಾನಿಯಲ್ಲಿ ಸಂಸದರು ಸೇರಬೇಕಾಗಿತ್ತು. ಇತ್ತೀಚೆಗೆ ಮಿಲಿಟರಿ ಬಗ್ಗೆ ನೀಡಿರುವ  ಹೇಳಿಕೆಯಿಂದಾಗಿ ಇಂದಿನ ಈ ಬೆಳವಣಿಗೆ ನಡೆದಿದೆ.
      ನಿಗೂಢ ಮೂಲಗಳಿಂದ ಸೂಕಿ ಅವರ ಬಂಧನ ಭಾನುವಾಾರ ರಾತ್ರಿ 

ಆಗಿದ್ದು ಈ ಬಗ್ಗೆ ಹೆಚ್ಚಿನ ವಿವರ ತಿಳಿದುಬಂದಿಲ್ಲ. ಇಂದು ಬೆಳಗ್ಗೆ 6.30ರ ಸುಮಾರಿಗೆ ಮ್ಯಾನ್ಮಾರ್ ನ ದೃಶ್ಯ ಮತ್ತು ಟೆಲಿವಿಷನ್, ಮ್ಯಾನ್ಮಾರ್ ವಾಯ್ಸ್ ರೇಡಿಯೊ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಕಾರ್ಯಕ್ರಮವನ್ನು ಎಂದಿನಂತೆ ಪ್ರಸಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.

      ದೇಶದಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿಕೊಂಡು ಬಂದು ದೇಶದ ನಾಯಕಿಯಾಗಿ ಮೆರೆದವರು 75 ವರ್ಷದ ಆಂಗ್ ಸ್ಯಾನ್ ಸೂಕಿ. ಕಳೆದ ವರ್ಷ ನವೆಂಬರ್ ನಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಮ್ಯಾನ್ಮಾರ್‌ ಸಂಸತ್ತಿನ 642 ಸ್ಥಾನಗಳ ಪೈಕಿ ಆಂಗ್ ಸ್ಯಾನ್ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ 396 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಿತ್ತು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries