HEALTH TIPS

ಮಿಂತ್ರ ಲೋಗೋವನ್ನು ಬದಲಿಸಿತು ಮಹಿಳೆಯ ದೂರು: ಕಾರಣವೇನು?

      ಮುಂಬೈ: ಖ್ಯಾತ ಇ-ಕಾಮರ್ಸ್ ಸಂಸ್ಥೆ ಮಿಂತ್ರ ತನ್ನ ಸಂಸ್ಥೆಯ ಲೋಗೋವನ್ನು ಬದಲಾವಣೆ ಮಾಡಲು ನಿರ್ಧರಿಸಿದೆ. ಇದಕ್ಕೆ ಕಾರಣ ಓರ್ವ ಮಹಿಳೆ ಸೈಬರ್ ಕ್ರೈಮ್ ಗೆ ನೀಡಿದ ದೂರು.

      ಈ ಲೋಗೋಗೂ ಮಹಿಳೆಗೂ ಸೈಬರ್ ಕ್ರೈಮ್ ದೂರಿಗೂ ಏನು ಸಂಬಂಧ ಅಂತೀರಾ? ದೂರು ನೀಡಿರುವವರ ಪ್ರಕಾರ ಮಿಂತ್ರಾ ಸಂಸ್ಥೆಯ ಲೋಗೋ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿದೆಯಂತೆ! 

      "ಮಿಂತ್ರಾ ಸಂಸ್ಥೆಯ ಲೋಗೋ ಮಹಿಳೆಯರೆಡೆಗೆ ಆಕ್ಷೇಪಾರ್ಹ ರೀತಿಯಲ್ಲಿದೆಯಷ್ಟೇ ಅಲ್ಲದೇ ಅವಮಾನ ಮಾಡುವ ರೀತಿಯಲ್ಲಿದೆ" ಎಂದು ಮುಂಬೈ ಮೂಲದ ಮಹಿಳೆ, ಅವೇಸ್ತಾ ಫೌಂಡೇಷನ್ ಎನ್ ಜಿಒ ನಲ್ಲಿರುವ ನಾಜ್ ಪಟೇಲ್ ಎಂಬುವವರು ಸೈಬರ್ ಕ್ರೈಮ್ ಗೆ ದೂರು ನೀಡಿದ್ದರು.

     ಫ್ಲಿಪ್ ಕಾರ್ಟ್ ಬೆಂಬಲಿತ ಇ-ಕಾಮರ್ಸ್ ದೈತ್ಯ ಮಿಂತ್ರದ ಲೋಗೋವನ್ನು ತೆಗೆದುಹಾಕಿ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೈಗೊಂಡಿದ್ದರು.

     ಮಹಿಳೆಯರೆಡೆಗೆ ಈ ಲೋಗೋ ಆಕ್ಷೇಪಾರ್ಹರೀತಿಯಲ್ಲಿದೆ ಎಂಬುದನ್ನು ಮನಗಂಡೆವು, ದೂರು ನೀಡಿದ ಬಳಿಕ ಮಿಂತ್ರ ಹಾಗೂ ಅದರ ಅಧಿಕಾರಿಗಳಿಗೆ ಮೇಲ್ ಮಾಡಿದ್ದೆವು, ಲೋಗೋ ಬದಲಾವಣೆ ಮಾಡುವುದಾಗಿ ಮಿಂತ್ರದಿಂದ ಪ್ರತಿಕ್ರಿಯೆ ಬಂದಿದೆ ಎಂದು ಸೈಬರ್ ಕ್ರೈಮ್ ವಿಭಾಗದ ಡಿಸಿಪಿ ರಶ್ಮಿ ಕರಂಡಿಕರ್ ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries