HEALTH TIPS

ಫ್ಯಾಷನ್ ಗೋಲ್ಡ್ ಹೂಡಿಕೆ ವಂಚನೆ; ಎಲ್ಲಾ ಪ್ರಕರಣಗಳಲ್ಲಿ ಕಮರುದ್ದೀನ್ ಗೆ ಜಾಮೀನು -ಇಂದು ಜೈಲಿನಿಂದ ಬಿಡುಗಡೆ


         ಕಣ್ಣೂರು: ಫ್ಯಾಷನ್ ಗೋಲ್ಡ್ ಜುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಬಂಧಿಯಾಗಿ ಜ್ಯೆಲಲ್ಲಿರುವ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಗೆ ಎದುರಾದ ಎಲ್ಲಾ ಪ್ರಕರಣಗಳಲ್ಲೂ   ಜಾಮೀನು ನೀಡಲಾಗಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಕಮರುದ್ದೀನ್ ಅವರನ್ನು ಕಳೆದ 93 ದಿನಗಳಿಂದ  ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ರಿಮಾಂಡ್ ಮಾಡಲಾಗಿತ್ತು. ಎಲ್ಲ ಪ್ರಕರಣಗಳಲ್ಲೂ ಶಾಸಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.         
     ಎಂ.ಸಿ.ಯ ವಿರುದ್ದ  148 ವಂಚನೆ ಪ್ರಕರಣಗಳಿವೆ.


         ಹೊಸದುರ್ಗ  ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಬಾಕಿ ಇದ್ದ ಆರು ಪ್ರಕರಣಗಳಲ್ಲಿ ಜಾಮೀನು ನೀಡಲಾಗಿದೆ. ಇದು ಕಮರುದ್ದೀನ್ ಜೈಲಿನಿಂದ ಬಿಡುಗಡೆಯಾಗಲು ದಾರಿಮಾಡಿಕೊಟ್ಟಿತು. ಚಂದೇರಾ, ಕಾಸರ‌ಗೋಡು ಮತ್ತು ಪಯ್ಯನ್ನೂರು ಪೊಲೀಸ್ ಠಾಣೆಗಳ ಆವರಣಕ್ಕೆ ಪ್ರವೇಶಿಸಬಾರದು ಎಂಬ ಷರತ್ತಿನ ಮೇರೆಗೆ ಜಾಮೀನು ನೀಡಲಾಗಿದೆ.
      ‌ನ್ಯಾಯಾಲಯದ ಎಲ್ಲಾ ವಿಚಾರಣೆಗಳನ್ನು ಪೂರ್ಣಗೊಳಿಸಿದ ನಂತರ ಅವರನ್ನು ಇಂದು ಸಂಜೆ ಕಣ್ಣೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗುವುದು. ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ನೇರವಾಗಿ ಮಂಜೇಶ್ವರ ಕ್ಷೇತ್ರಕ್ಕೆ ತೆರಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries