HEALTH TIPS

ನೀವೂ ಈ ಏಳು ಬ್ಯಾಂಕ್‌ಗಳ ಗ್ರಾಹಕರೆ? ಏಪ್ರಿಲ್‌ 1ರಿಂದ ನಿಮ್ಮ ಚೆಕ್‌ಬುಕ್‌, ಪಾಸ್‌ಬುಕ್‌ ಆಗಿಲಿವೆ ಅಮಾನ್ಯ

           ನವದೆಹಲಿ: ಕೆಲವು ಬ್ಯಾಂಕ್‌ಗಳು ಇನ್ನು ಕೆಲವು ಬ್ಯಾಂಕ್‌ಗಳ ಜತೆ ವಿಲೀನ ಆಗಿರುವ ಹಿನ್ನೆಲೆಯಲ್ಲಿ ಬರುವ ಏಪ್ರಿಲ್ 1 ರಿಂದ ವಿಲೀನಗೊಂಡಿರುವ ಬ್ಯಾಂಕ್‌ಗಳ ಚೆಕ್‌ಬುಕ್‌ ಮತ್ತು ಪಾಸ್‌ಬುಕ್‌ಗಳು ಅಮಾನ್ಯವಾಗಲಿವೆ. ಈ ಹಿನ್ನೆಲೆಯಲ್ಲಿ ಬ್ಯಾಕ್‌ ಖಾತೆಗಳಲ್ಲಿ ಕೆಲವೊಂದು ಬದಲಾವಣೆ ಆಗಲಿವೆ.

           ನಿಮ್ಮ ಖಾತೆಯ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್‌ ಇವುಗಳು ಕೂಡ ಬದಲಾವಣೆಯಾಗಲಿದ್ದು, ಮೊದಲೇ ಈ ಬಗ್ಗೆ ನೀವು ತಿಳಿದುಕೊಂಡರೆ ಒಳ್ಳೆಯದು. ಈ ಬ್ಯಾಂಕ್‌ಗಳಲ್ಲಿ ನೀವು ಇದಾಗಲೇ ಖಾತೆ ಹೊಂದಿದ್ದರೆ. ತಕ್ಷಣ ಹೊಸ ಚೆಕ್ ಬುಕ್ ಮತ್ತು ಐಎಫ್‌ಎಸ್‌ಸಿ ಕೋಡ್ ಪರಿಶೀಲಿಸಿ ಮುಂದೆ ಆಗಬಹುದಾದ ಕೊನೆಕ್ಷಣದ ಆತಂಕವನ್ನು ನಿವಾರಿಸಿಕೊಳ್ಳಿ…
                               ವಿಲೀನಗೊಂಡಿರುವ ಏಳು ಬ್ಯಾಂಕ್‌ಗಳು ಎಂದರೆ :................

             ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್
                                ವಿಲೀನಗೊಂಡಿರುವ ಪ್ರಕ್ರಿಯೆ ಹೀಗಿದೆ:

* ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್‌ಗಳನ್ನು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಲಾಗಿದೆ. ಅಲಹಾಬಾದ್ ಬ್ಯಾಂಕ್ ಸರ್ಕಾರ ಇಂಡಿಯನ್ ಬ್ಯಾಂಕ್ ನೊಂದಿಗೆ ವಿಲೀನವಾಗಿದೆ.

* ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಗಳು ಬ್ಯಾಂಕ್ ಆಫ್ ಬರೋಡಾದೊಂದಿಗೆ ಇದಾಗಲೇ ವಿಲೀನಗೊಂಡಿವೆ. ಏಪ್ರಿಲ್ 1ರಿಂದ ಬ್ಯಾಂಕ್ ಆಫ್ ಬರೋಡಾದ ಚೆಕ್‌ಬುಕ್‌ ಮತ್ತು ಪಾಸ್‌ಬುಕ್‌ಗಳು ‌ಮಾತ್ರ ಅದರಲ್ಲಿ ಕಾರ್ಯನಿರ್ವಹಿಸಲಿವೆ.

* ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಜತೆ ವಿಲೀನಗೊಂಡಿವೆ. ಈ ಎರಡು ಬ್ಯಾಂಕ್‌ಗಳ ಚೆಕ್ ಬುಕ್‌ಗಳು 2021ರ ಮಾರ್ಚ್ 31ರವರೆಗೆ ಮಾತ್ರ ಸಿಂಧುತ್ವ ಹೊಂದಿರಲಿದೆ.

* ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಖಾತೆದಾರರು ಈಗ ತಮ್ಮ ಹೊಸ ಐಎಫ್‌ಎಸ್‌ಸಿ ಕೋಡ್‌ಗಳನ್ನು ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ www.unionbankofindia.co.in ನಲ್ಲಿ ತಿಳಿದುಕೊಳ್ಳಬಹುದಾಗಿದೆ. ಇದನ್ನು ಕ್ಲಿಕ್ಕಿಸಿದ ಬಳಿಕ ಅಮಾಲ್ಗೇಶನ್ ಸೆಂಟರ್ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಐಎಫ್‌ಎಸ್‌ಸಿ ಕೋಡ್ ಅಪ್‌ಡೇಟ್‌ ಮಾಡಬಹುದು. ಬ್ಯಾಂಕಿನ ಗ್ರಾಹಕ ಸೇವಾ ಸಂಖ್ಯೆ 1800-208-2244 ಅಥವಾ 1800-425-1515 ಅಥವಾ 1800-425-3555 ಗೆ ಕರೆ ಮಾಡಬಹುದು. ಅಥವಾ ಎಸ್ ಎಂಎಸ್ ಮೂಲಕ ಮಾಹಿತಿ ಪಡೆಯಬಹುದು. ಇದಕ್ಕಾಗಿ ನೀವು IFSC <OLD IFSC > ಟೈಪ್ ಮಾಡಿ 9223008486 ಗೆ ಸಂದೇಶ ಕಳುಹಿಸಬೇಕು.

* ಕೆನರಾ ಬ್ಯಾಂಕ್ ವಿಲೀನದ ನಂತರ ಸಿಂಡಿಕೇಟ್ ಬ್ಯಾಂಕ್‌ನ ಚೆಕ್‌ಬುಕ್‌ನ ವಿಲೀನ ಅವಧಿಯನ್ನು 2021ರ ಜೂನ್ 30ರವರೆಗೆ ಮುಂದೂಡಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries