HEALTH TIPS

ವಿಶ್ವ ಸಂತೋಷ ವರದಿ 2021: ಫಿನ್ಲೆಂಡ್ ಟಾಪ್, 149 ರಾಷ್ಟ್ರಗಳ ಪೈಕಿ ಭಾರತಕ್ಕೆ 139ನೇ ಸ್ಥಾನ

           ನವದೆಹಲಿ: ವಿಶ್ವಸಂಸ್ಥೆಯು ಶುಕ್ರವಾರ ಬಿಡುಗಡೆ ಮಾಡಿದ ವಿಶ್ವ ಸಂತೋಷ ವರದಿ 2021ರ ಪಟ್ಟಿಯಲ್ಲಿ ಫಿನ್ಲೆಂಡ್ ಅಗ್ರಸ್ಥಾನದಲ್ಲಿದ್ದು, 149 ರಾಷ್ಟ್ರಗಳ ಪೈಕಿ ಭಾರತ 139ನೇ ಸ್ಥಾನ ಪಡೆದುಕೊಂಡಿದೆ.


         ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಸಲ್ಯೂಷನ್ ನೆಟ್ ವರ್ಕ್ ಹೊರಡಿಸಿದ' ವಿಶ್ವ ಸಂತೋಷ ವರದಿಯು ಕೊರೋನಾ ಸಾಂಕ್ರಾಮಿಕ ವಿಶ್ವದಾದ್ಯಂತ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದರ ಮೇಲೆ ಕೇಂದ್ರೀಕರಿಸಿದೆ.

         ವಿಶ್ವದ 149 ದೇಶಗಳ ನಾಗರಿಕರು ತಾವು ಎಷ್ಟು ಸಂತೋಷದಿಂದ ಇದ್ದೇವೆ ಎಂದು ಹೇಳಿರುವುದರ ಮೇಲೆ ದೇಶಗಳು ವರದಿಯಲ್ಲಿ ತಮ್ಮ ಸ್ಥಾನಗಳನ್ನು ಪಡೆದಿವೆ. ನಮ್ಮ ಗುರಿಯು ಎರಡು ಉದ್ದೇಶಗಳನ್ನು ಹೊಂದಿದೆ.

       ಮೊದನೆಯದಾಗಿ ಜನರ ಜೀವನದ ಸಂರಚನೆ ಮತ್ತು ಗುಣಮಟ್ಟದ ಮೇಲೆ ಸಾಂಕ್ರಾಮಿಕದ ಪರಿಣಾಮಗಳನ್ನು ಕೇಂದ್ರೀಕರಿಸುವುದು, ಎರಡನೇಯದಾಗಿ ಸಾಂಕ್ರಾಮಿಕವನ್ನು ವಿಶ್ವದಾದ್ಯಂತ ಸರ್ಕಾರಗಳು ಹೇಗೆ ಎದುರಿಸಿದೆ ಎಂಬುದನ್ನು ವಿವರಿಸಲು ಮತ್ತು ಮೌಲ್ಯಮಾಪನ ಮಾಡುವುದಾಗಿದೆ. ನಿರ್ದಿಷ್ಟವಾಗಿ ಕೆಲ ದೇಶಗಳು ಇತರ ದೇಶಗಳಿಗಿಂತ ಯಾಕೆ ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂಬುದನ್ನು ವಿವರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

          ಈ ಪಟ್ಟಿಯಲ್ಲಿ ಭಾರತ 139ನೇ ಸ್ಥಾನದಲ್ಲಿದೆ. ಕಳೆದ ವರ್ಷ 140ನೇ ಸ್ಥಾನದಲ್ಲಿತ್ತು. ಫಿನ್ಲೆಂಡ್ ಮೊದಲ ಸ್ಥಾನದಲ್ಲಿದ್ದು, ಐಸ್ ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಜರ್ಲ್ಯಾಂಡ್ , ನೆದರ್ ಲ್ಯಾಂಡ್ಸ್, ಸ್ವಿಡನ್, ಜರ್ಮನಿ ಮತ್ತು ನಾರ್ವೆ ನಂತರದ ಸ್ಥಾನದಲ್ಲಿವೆ.

         ಪಾಕಿಸ್ತಾನ 105ನೇ, ಬಾಂಗ್ಲಾದೇಶ 101 ಮತ್ತು ಚೀನಾ 84ನೇ ಸ್ಥಾನದಲ್ಲಿವೆ. ಜಿಂಬಾಬ್ವೆ 148, ರವಾಂಡ 147, ಬೊಟ್ಸ್ ವಾನಾ(146) ಮತ್ತು ಲೆಸೊತೊ 14ನೇ ಸ್ಥಾನ ಪಡೆದುಕೊಂಡಿವೆ. ಅಮೆರಿಕಾ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದ್ದರೂ 19ನೇ ಸ್ಥಾನದಲ್ಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries