HEALTH TIPS

ನವರಾತ್ರಿ ಸಂಭ್ರಮ: ಬದಿಯಡ್ಕದಲ್ಲಿ ಗರ್ಜಿಸಿದ ವಿಶೇಷ ಸಿಂಹ ವೇಷ

ಬದಿಯಡ್ಕ: ನವರಾತ್ರಿ ಮಹೋತ್ಸವದ ಅಂಗವಾಗಿ ಜಾನಪದ ಕಲಾವಿದ ವಸಂತ ಬಾರಡ್ಕ ಅವರ ನೇತೃತ್ವದಲ್ಲಿ ಸಜ್ಜುಗೊಂಡ ವಿಶೇಷ 'ಸಿಂಹ ವೇಷ' ಪ್ರದರ್ಶನಕ್ಕೆ ಇಲ್ಲಿನ ತುಳು ಭವನದಲ್ಲಿ ಸಡಗರದಿಂದ ಚಾಲನೆ ನೀಡಲಾಯಿತು.


ಕರಾವಳಿಯ ಜಾನಪದ ಸೊಗಡು ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವ ಸಿಂಹ ವೇಷವು ನವರಾತ್ರಿಯ ಪ್ರಮುಖ ಆಕರ್ಷಣೆಯಾಗಿದೆ. ಕಾರ್ಯಕ್ರಮಕ್ಕೆ ತಾಸೆ ಬಾರಿಸುವ ಮೂಲಕ ಚಾಲನೆ ನೀಡಿದ ಧಾರ್ಮಿಕ ಮುಖಂಡ ಹಾಗೂ ಯಕ್ಷಗಾನ ಅರ್ಥಧಾರಿ ಲಕ್ಷ್ಮಣ ಪ್ರಭು ಕರಿಂಬಿಲ ಅವರು, "ತಾಸೆಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಸಿಂಹ ವೇಷದಂತಹ ಜನಪದ ಕಲೆಗಳು ನಾಡಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಜೀವಂತವಾಗಿ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ," ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ಮಾಸ್ಟರ್ ಪೆರುಮುಖ, ಮುಖಂಡರಾದ ಉದಯ ಕುಮಾರ್ ಆರ್ತಿಪಳ್ಳ, ಅನಂತ ಕುಮಾರ್ ಬರ್ಲ ಹಾಗೂ ಹರೀಶ್ ಗೋಸಾಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಗಡಿನಾಡಿನ ನೆಲದಲ್ಲಿ ಜಾನಪದ ಕಲೆಯ ಕಂಪನ್ನು ಪಸರಿಸಿದ ಈ ವೇಷವು, ನವರಾತ್ರಿ ಹಬ್ಬದ ಉತ್ಸಾಹವನ್ನು ಇಮ್ಮಡಿಗೊಳಿಸಿ ಜನಮನ ಸೆಳೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries