HEALTH TIPS

ಎಡರಂಗದ ಚುನಾವಣಾ ಪ್ರಣಾಳಿಕೆ ಬಿಡುಗಡೆ: 40 ಲಕ್ಷ ಉದ್ಯೋಗ ಸೃಷ್ಟಿ, ಕೃಷಿ ಆದಾಯದಲ್ಲಿ ಶೇ.50 ಹೆಚ್ಚಳ, ಕಲ್ಯಾಣ ಪಿಂಚಣಿ ಮೊತ್ತ 2,500 ರೂ.ಗೆ, ಗೃಹಿಣಿಯರಿಗೆ ಪಿಂಚಣಿ ಯೋಜನೆ ಜಾರಿ

                           

              ತಿರುವನಂತಪುರ: ವಿಧಾನಸಭಾ ಚುನಾವಣೆಗೆ ಎಲ್‍ಡಿಎಫ್‍ನ ಪ್ರಣಾಳಿಕೆಯನ್ನು ತಿರುವನಂತಪುರದಲ್ಲಿ ಇಂದು ಬಿಡುಗಡೆ ಮಾಡಲಾಗಿದೆ.

           ಸಿಪಿಎಂ ರಾಜ್ಯ ಕಾರ್ಯದರ್ಶಿ ಎ.ವಿಜಯರಾಘವನ್ ಈ ಸಂದರ್ಭ ಮಾತನಾಡಿ, ಸರ್ಕಾರವನ್ನು ಮುಂದುವರಿಸುವುದು ಪ್ರಣಾಳಿಕೆಯ ಮುಖ್ಯ ಗುರಿಯಾಗಿದೆ. "ಜನರು ಎಡರಂಗದ ಆಡಳಿತವನ್ನು ಇನ್ನೂ ಬಯಸುತ್ತಿದ್ದಾರೆ" ಎಂದು ಅವರು ಹೇಳಿದರು.

           ಪ್ರಣಾಳಿಕೆಯಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ 50 ವಿಷಯಗಳಿದ್ದು, ವಿದ್ಯಾವಂತರಿಗೆ ಉದ್ಯೋಗ ನೀಡಲು ಆದ್ಯತೆ ನೀಡುವ ಭರವಸೆ ನೀಡಲಾಗಿದೆ.

             40 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದು ಬಿಂಬಿಸಲಾಗಿದೆ. ಕೃಷಿ ಕ್ಷೇತ್ರದ ಆದಾಯದಲ್ಲಿ ಶೇ.50 ಹೆಚ್ಚಳವಾಗಲಿದೆ. ಕಲ್ಯಾಣ ಪಿಂಚಣಿಯನ್ನು 2500 ರೂ.ಗೆ ಹೆಚ್ಚಿಸಲಾಗುವುದು ಮತ್ತು ಗೃಹಿಣಿಯರಿಗೆ ಪಿಂಚಣಿ ಯೋಜನೆ ಜಾರಿಗೆ ತರಲಾಗುವುದು ಎಂದು ಉಲ್ಲೇಖಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries