ಕೋಝಿಕ್ಕೋಡ್: ಕೋಝಿಕ್ಕೋಡ್ ಉತ್ತರ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಂ.ಟಿ.ರಮೇಶ್ ಅವರು ನಾಮಪತ್ರ ಸಲ್ಲಿಸಿದರು. ಎರಾನ್‍ಜಿಪಳಂ ಚುನಾವಣಾ ಸಮಿತಿ ಕಚೇರಿ ಆವರಣದಿಂದ ನೂರಾರು ಕಾರ್ಯಕರ್ತರು ರ್ಯಾಲಿಯೊಂದಿಗೆ ತೆರಳಿ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಲಾಯಿತು.
ಕರ್ನಾಟಕದ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಮೋಹನನ್ ಮಾಸ್ತರ್, ಜಿಲ್ಲಾ ಕಾರ್ಯದರ್ಶಿಗಳಾದ ಇ ಪ್ರಶಾಂತ್ ಕುಮಾರ್ ಮತ್ತು ಎಂ.ರಜೀವ್ ಕುಮಾರ್, ಕ್ಷೇತ್ರದ ಅಧ್ಯಕ್ಷ ಕೆ. ಶೈಬು ಅವರೊಂದಿಗೆ ರಾಜ್ಯ ಸಮಿತಿ ಸದಸ್ಯ ಶ್ಯಾಮ್ ಪ್ರಸಾದ್ ಮತ್ತು ಪಿಎಂ ರಮಣಿ ಭಾಯ್, ಕಾಪೆರ್Çರೇಶನ್ ಕೌನ್ಸಿಲರ್‍ಗಳಾದ ಎನ್.ಶಿವಪ್ರಸಾದ್, ಸಿ.ಎಸ್.ಸತ್ಯಭಾಮ, ಸರಿತಾ ಪಾರಾಯೇರಿ ಮತ್ತು ಅನುರಾಧಾ ಥಾಯತ್ ಇದ್ದರು.



