ಆಲಪ್ಪುಳ: ಆಲಪ್ಪುಳದ ಬಿಜೆಪಿ ಅಭ್ಯರ್ಥಿ ವಲಿಯಚುಡುಕಾಡು ಹುತಾತ್ಮ ಭವನದಲ್ಲಿ ಮಾಲಾರ್ಪಣೆಗೈದು ಆಶ್ಚರ್ಯಚಕಿತಗೊಳಿಸಿದ ಘಟನೆ ನಡೆದಿದೆ. ಆಲಪ್ಪುಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೀಪ್ ವಾಚಸ್ಪತಿ ಪುಷ್ಪರ್ಚನ ಮಾಡಿ ಗಮನ ಸೆಳೆದರು.
ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ಮೊದಲು ಅನಿರೀಕ್ಷಿತವಾಗಿ ಪುನ್ನಾಪ್ರ-ವಯಾಲರ್ ಹುತಾತ್ಮ ಭವನಕ್ಕೆ ಆಗಮಿಸಿದರು. ಈ ಹುತಾತ್ಮ ಭವನವು ಬಡ ಕಾರ್ಮಿಕರನ್ನು ವಂಚಿಸಿದ ಕಮ್ಯುನಿಸ್ಟರ ಕಥೆಯನ್ನು ಹೇಳುತ್ತದೆ ಎಂದು ಸಂದೀಪ್ ವಾಚಸ್ಪತಿ ಹೇಳಿದರು.
ನೂರಾರು ಹುತಾತ್ಮ ಕಾರ್ಮಿಕರಿಗೆ ಗೌರವ ಸಲ್ಲಿಸಲು ಬಂದಿದ್ದೇನೆ ಎಂದು ಸಂದೀಪ್ ವಾಚಸ್ಪತಿ ಹೇಳಿದರು.



