HEALTH TIPS

ಗಾಂಧಿ ಶಾಂತಿ ಪ್ರಶಸ್ತಿಗೆ ಶೇಕ್ ಮುಜಿಬರ್ ರೆಹಮಾನ್, ಓಮನ್ ಸುಲ್ತಾನ ಆಯ್ಕೆ

              ನವದೆಹಲಿ: 2020ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿಗೆ ಬಾಂಗ್ಲಾದೇಶದ ಶೇಕ್ ಮುಜಿಬರ್ ರೆಹಮಾನ್ ಭಾಜನರಾಗಿರುವುದಾಗಿ ಸಂಸ್ಕೃತಿ ಸಚಿವಾಲಯ ಸೋಮವಾರ ತಿಳಿಸಿದೆ.

        2019ನೇ ಸಾಲಿನ ಪ್ರತಿಷ್ಠಿತ ಪ್ರಶಸ್ತಿಗೆ ಓಬನ್ ನ ದಿವಂಗತ ಸುಲ್ತಾನ ಕಾಬೂಸ್ ಬಿನ್ ಸೈದ್ ಅಲ್‍ಸೈದ್ ಅವರನ್ನು ಆಯ್ಕೆ ಮಾಡಲಾಗಿದೆ. ಭಾರತದೊಂದಿಗೆ ಸಂಬಂಧ ಬಲವರ್ಧನೆಯಲ್ಲಿ ಸುಲ್ತಾನ್ ಅವರ ದೂರದೃಷ್ಟಿ ಮತ್ತು ಗಲ್ಫ್ ವಲಯಲ್ಲಿ ಶಾಂತಿ ಮತ್ತು ಅಹಿಂಸೆ ನೆಲೆಸುವ ನಿಟ್ಟಿನಲ್ಲಿ ಅವರ ಪ್ರಯತ್ನವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

      1995ರಿಂದಲೂ ಭಾರತ ಸರ್ಕಾರದಿಂದ ಗಾಂಧಿ ಶಾಂತಿ ವಾರ್ಷಿಕ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ. ಮಹಾತ್ಮ ಗಾಂಧಿ ಅವರ 125ನೇ ಜನ್ಮ ವರ್ಷಾಚರಣೆ ಸ್ಮರಣಾರ್ಥ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ರಾಷ್ಟ್ರಿಯತೆ. ಬಣ್ಣ, ಭಾಷೆ, ಜಾತಿ, ಲಿಂಗ ಬೇಧ ಬಾವವಿಲ್ಲದೆ ಎಲ್ಲ ಜನರಿಗೂ ಈ ಪ್ರಶಸ್ತಿ ಮುಕ್ತವಾಗಿದೆ.

       ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯ ನ್ಯಾಯಾಧೀಶರು, ಲೋಕಸಭೆಯಲ್ಲಿನ ಅತಿದೊಡ್ಡ ಪ್ರತಿಪಕ್ಷದ ಮುಖಂಡರನ್ನೊಳಗೊಂಡ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುತ್ತದೆ. ಸ್ಪೀಕರ್ ಓಂ ಬಿರ್ಲಾ, ಮತ್ತು ಸುಲಭ ಅಂತಾರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆ ಸ್ಥಾಪಕ ಬಿಂದೇಶ್ವರ್ ಪಠಾಕ್ ಕೂಡಾ ಈ ಸಮಿತಿಯಲ್ಲಿದ್ದಾರೆ.

           ಮಾರ್ಚ್ 19 ರಂದು ಸಭೆ ಸೇರಿದ ಸಮಿತಿ ಸರ್ವಾನುಮತದಿಂದ ಬಾಂಗ್ಲಾದೇಶದ ರಾಷ್ಟ್ರಪಿತ ಶೇಕ್ ಮುಜಿಬರ್ ರೆಹಮಾನ್, ಮತ್ತು ಓಮನ್ ನನ್ನು ಧೀರ್ಷಕಾಲ ಆಳಿದ ಸುಲ್ತಾನ ಕಾಬೂಸ್ ಬಿನ್ ಸೈದ್ ಅಲ್‍ಸೈದ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries