HEALTH TIPS

ಮೂಗಿನ ಮೂಲಕ ಹಾಕುವ ಲಸಿಕೆ: ಕ್ಲಿನಿಕಲ್‌ ಟ್ರಯಲ್‌ ಪ್ರಾರಂಭಿಕ ಹಂತದಲ್ಲಿ

            ನವದೆಹಲಿ: ಕೋವಿಡ್‌ ತಡೆಯಲು ಮೂಗಿನ ಮೂಲಕ ಹಾಕಬಹುದಾದ ಸಂಭಾವ್ಯ ಲಸಿಕೆಯ (ಇಂಟ್ರಾನಾಸಲ್ ವ್ಯಾಕ್ಸಿನ್‌ ಕ್ಯಾಂಡಿಡೇಟ್‌) ಕ್ಲಿನಿಕಲ್‌ ಟ್ರಯಲ್‌ ಇನ್ನೂ ಪ್ರಾರಂಭಿಕ ಹಂತದಲ್ಲಿದೆ ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ರಾಜ್ಯಸಭೆಗೆ ಮಂಗಳವಾರ ಹೇಳಿದರು.

         ಮೂಗಿನ ಮೂಲಕ ನೀಡುವ ಲಸಿಕೆಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬ ಪ್ರಶ್ನೆಗೆ, ಅವರು ಉತ್ತರಿಸಿದರು.

         'ಸದ್ಯ 21 ದಿನಗಳ ಅಂತರದಲ್ಲಿ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗುತ್ತಿದೆ. ಈ ಲಸಿಕೆಯ ಮೊದಲ ಹಂತದ ಕ್ಲಿನಿಕಲ್‌ ಟ್ರಯಲ್‌ ಪೂರ್ಣಗೊಂಡ ನಂತರ, ಎಷ್ಟು ಡೋಸ್‌ಗಳನ್ನು ನೀಡಬೇಕಾಗುತ್ತದೆ ಎಂಬುದನ್ನು ನಿರ್ಧರಿಸಲು ಸಾಧ್ಯ' ಎಂದರು.

          ಈ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ ಅಭಿವೃದ್ಧಿಪಡಿಸುತ್ತಿದೆ.

'ಬಹುತೇಕ ಲಸಿಕೆಗಳನ್ನು ಸ್ನಾಯುಗಳ ಮೂಲಕ ನೀಡಲಾಗುತ್ತದೆ. ಮೂಗಿನ ಮೂಲಕ ನೀಡುವ ಲಸಿಕೆಯನ್ನು ಮೂಗಿನ ಹೊಳ್ಳೆಗಳ ಒಳಗೆ ಸಿಂಪಡಿಸಲಾಗುತ್ತದೆ. ಈ ವಿಧಾನದಲ್ಲಿ ಸೂಜಿ ಬಳಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಸಚಿವ ಚೌಬೆ ಉತ್ತರಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries