HEALTH TIPS

ಕೇರಳದಲ್ಲಿ ಮಹಿಳಾ ಸಿಎಂ ಇರಬೇಕೆಂಬ ಬಯಕೆ ವ್ಯಕ್ತಪಡಿಸಿದ ರಾಗಾ: ಲತಿಕಾ ಸುಭಾಷ್ ರನ್ನು ನೆನಪಿಸಿದ ಸೋಷಿಯಲ್ ಮೀಡಿಯ!

                         

        ಪೆರುಂಬವೂರ್: ಕೇರಳದಲ್ಲಿ ಮಹಿಳಾ ಮುಖ್ಯಮಂತ್ರಿ ಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಿನ್ನೆ ಪೆರುಂಬವೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿ, ರಾಜ್ಯದಲ್ಲಿ ಮಹಿಳಾ ನೇತಾರೆಯರು ಮುನ್ನೆಲೆಗೆ ಬಂದು ಮುಖ್ಯಮಂತ್ರಿಯಾಗಬೇಕು ಎಂದರು. ಜೊತೆಗೆ ಇಂತಹ ಕಾಲಕ್ಕೆ ಇನ್ನಷ್ಟು ಕಾಯಬೇಕಾಗಿರುವುದೂ ಸತ್ಯ ಎಂದರು.  ಆದರೆ ರಾಹುಲ್ ಅವರ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಪಹಾಸ್ಯ ಮತ್ತು ಟೀಕೆಗಳಿಗೆ ದಾರಿ ಮಾಡಿಕೊಟ್ಟವು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಿಕಾ ಸುಭಾಷ್ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಿದ ನಂತರ ಸಾರ್ವಜನಿಕವಾಗಿ ತಲೆ ಬೋಳಿಸಿಕೊಂಡ ಪ್ರಕರಣವನ್ನು ಸಾಮಾಜಿಕ ಮಾಧ್ಯಮಗಳು ಎತ್ತಿ ತೋರಿಸಿದೆ.

          ಕಾಂಗ್ರೆಸ್ ಯುವಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ಹೇಳಿದ ರಾಹುಲ್, ಮಹಿಳೆಯೋರ್ವೆ ಕೇರಳದ ಮುಖ್ಯಮಂತ್ರಿಯಾಗಬೇಕೆಂಬುದು ನನ್ನ ಅಭಿಲಾಷೆ  ಎಂದರು. ಅವರ ಕಾಮೆಂಟ್‍ಗಳು ಅನೇಕರಿಗೆ ಕಿರಿಕಿರಿ ಉಂಟುಮಾಡುತ್ತವೆ ಮತ್ತು ಕೆಲವರನ್ನು ಲಕ್ಷ್ಯದಲ್ಲಿಟ್ಟು ಎಂಬ ಅಂಶದಿಂದ ರಾಹುಲ್ ಅವರ ಮಾತುಗಳು ಪೂರ್ವ ಯೋಜಿತವೇ ಎಂಬ ಸಂಶಯಕ್ಕೂ ಎಡೆಮಾಡಿದೆ.  ಆದರೆ ರಾಹುಲ್ ಅವರ ಹೇಳಿಕೆ ಬಗ್ಗೆ  ಪ್ರೇಕ್ಷಕರಿಂದ ಯಾವುದೇ ಸ್ಪಂಧನೆ ವ್ಯಕ್ತವಾಗದ ಬಗ್ಗೆ ರಾಹುಲ್ ಗಮನಸೆಳೆದರು. 

            ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಚ್ಚಿನ ಮಹಿಳೆಯರನ್ನು ಸೇರ್ಪಡೆಗೊಳಿಸಬೇಕೆಂಬ ಆಕಾಂಕ್ಷೆ  ಇತ್ತು. ಇದು ಭವಿಷ್ಯದಲ್ಲಿ ಸಾಧ್ಯ. "ಮಹಿಳಾ ಮುಖ್ಯಮಂತ್ರಿಯೊಬ್ಬರ ತಯಾರಿಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ" ಎಂದು ಅವರು ಹೇಳಿದರು. ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಲತಿಕಾ ಸುಭಾಷ್ ಕಾಂಗ್ರೆಸ್ ತೊರೆದಿದ್ದರು. ಏಟ್ಟಮನೂರಿನಲ್ಲಿ, ಅವರು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ಸಾರ್ವಜನಿಕವಾಗಿ ತಲೆ ಬೋಳಿಸಿಕೊಂಡ ಲತಿಕಾ ಸುಭಾಷ್ ಅವರ ಕ್ರಮವು ಕಾಂಗ್ರೆಸ್ ನಿಂದ ಸಾಕಷ್ಟು ಟೀಕೆಗೊಳಗಾಗಿತ್ತು. ಲತಿಕಾ ಸುಭಾಷ್ ಎಐಸಿಸಿ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿರುವರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries