ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವತಿಯಿಂದ ಪೆ`ವಳಿಕೆ ಗ್ರಾಮ ಪಂಚಾಯಿತಿ ಒಂಭತ್ತನೇ ವಾರ್ಡಿನ ಕಕ್ವೆ ಪರಿಶಿಷ್ಟ ಜಾತಿ ಕಾಲನಿಗಳ ಸಂದರ್ಶನ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಲನಿ ನಿವಾಸಿಗಳ ಮೂಲಭೂತ ಸೌಕರ್ಯಗಳ ಕುರಿತು ಚರ್ಚಿಸಲಾಯಿತು. ವಾರ್ಡು ಸದಸ್ಯೆ ಪುಷ್ಪಾಲಕ್ಮ್ಷಿ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ರಾಮಪ್ಪ ಎಂ.ಪಿ, ಕಾರ್ಯದರ್ಶಿ ಹರಿಶ್ಚಂದ್ರ ಪುತ್ತಿಗೆ, ಜಿಲ್ಲಾ ಸಮಿತಿಯ ಸದಸ್ಯ ಹರಿರಾಮ ಕುಳೂರು, ಗೋಪಾಲ ದರ್ಬೆತ್ತಡ್ಕ, ಸುಧಾಕರ ಬೆಳ್ಳಿಗೆ, ಚಂದಪ್ಪ ಕಕ್ವೆ, ಸುಂದರ ಸುದೆಂಬಳ, ರಮೇಶ್ ಕಕ್ವೆ, ಬಾಬು ಬಂದ್ಯೋಡು ಜೊತೆಗಿದ್ದರು.





