HEALTH TIPS

ರಾಜ್ಯದಲ್ಲಿ ದಂಗುಗೊಳಿಸಿದ ಸೋಂಕು ಏರಿಕೆ: ಇಂದು 32819 ಮಂದಿಗೆ ಸೋಂಕು ಪತ್ತೆ: 18413 ಮಂದಿ ಗುಣಮುಖ: ಪರೀಕ್ಷಾ ಸಕಾರಾತ್ಮಕ ದರ ಶೇ. 23.24!

                   

           ತಿರುವನಂತಪುರ: ಆತಂಕಕಾರಿ ವಿದ್ಯಮಾನದಲ್ಲಿ ಕೇರಳದಲ್ಲಿ ಇಂದು ಇದೇ ಮೊದಲಬಾರಿಗೆ ಕೋವಿಡ್ ಬಾಧುಇತರ ಸಂಖ್ಯೆ ಮೂವತ್ತು ಸಾವಿರ ದಾಟಿದ್ದು, ಇಂದು 32,819 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಕೋಝಿಕೋಡ್ 5015, ಎರ್ನಾಕುಳಂ 4270, ಮಲಪ್ಪುರಂ 3251, ತ್ರಿಶೂರ್ 3097, ಕೊಟ್ಟಾಯಂ 2970, ತಿರುವನಂತಪುರ 2892, ಪಾಲಕ್ಕಾಡ್ 2071, ಕಣ್ಣೂರು 1996, ಆಲಪ್ಪುಳ 1770, ಕೊಲ್ಲಂ 1591, ಪತ್ತನಂತಿಟ್ಟು 1163, ವಯನಾಡ್ 968, ಕಾಸರಗೋಡು 906, ಇಡುಕ್ಕಿ 859 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

         ಕಳೆದ 24 ಗಂಟೆಗಳಲ್ಲಿ 1,41,199 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.23.24 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,53,54,299 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

           ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಸೋಂಕು ದೃಢಪಡಿಸಿಲ್ಲ. ಯುಕೆ (108), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಈವರೆಗೆ ಒಟ್ಟು 116 ಮಂದಿ ಜನರಿಗೆ ಸೋಂಕು ಖಚಿತಪಡಿಸಲಾಗಿದ್ದುನ ಈ ಪೈಕಿ 112 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

         ಕಳೆದ 24 ಗಂಟೆಗಳಲ್ಲಿ  32 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿರುವುದು ದೃಢಪಡಿಸಲಾಗಿದೆ. ಒಟ್ಟು ಸಾವಿನ ಸಂಖ್ಯೆ 5170 ಕ್ಕೆ ಏರಿಕೆಯಾಗಿದೆ. 

      ಇಂದು, ಸೋಂಕು ಪತ್ತೆಯಾದವರಲ್ಲಿ 265 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 30,409 ಮಂದಿ ಜನರಿಗೆ ಸೋಂಕು ತಗಲಿತು. 2049 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 4819, ಎರ್ನಾಕುಳಂ 4207, ಮಲಪ್ಪುರಂ 3097, ತ್ರಿಶೂರ್ 3072, ಕೊಟ್ಟಾಯಂ 2761, ತಿರುವನಂತಪುರ 2670, ಪಾಲಕ್ಕಾಡ್ 936, ಕಣ್ಣೂರು 1776, ಆಲಪ್ಪುಳ 1759, ಕೊಲ್ಲಂ 1578, ಪತ್ತನಂತಿಟ್ಟು 1086, ವಯನಾಡು 944, ಕಾಸರಗೋಡು 862, ಇಡುಕ್ಕಿ 842 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ. 

         ಇಂದು 96 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ಪತ್ತೆಯಾಗಿದೆ. ಕಣ್ಣೂರು 31, ಪಾಲಕ್ಕಾಡ್ ಮತ್ತು ಕಾಸರಗೋಡು ತಲಾ 14, ವಯನಾಡ್ 8, ಕೊಟ್ಟಾಯಂ 7, ಕೊಲ್ಲಂ 6, ತ್ರಿಶೂರ್ 5, ಎರ್ನಾಕುಳಂ 4, ತಿರುವನಂತಪುರ, ಪತ್ತನಂತಿಟ್ಟು ತಲಾ 2, ಆಲಪ್ಪುಳ, ಇಡುಕ್ಕಿ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿರುವರು. 

     ಸೋಂಕು ಪತ್ತೆಯಾದ 18,413 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 1012, ಕೊಲ್ಲಂ 4499, ಪತ್ತನಂತಿಟ್ಟು 253, ಆಲಪ್ಪುಳ 136, ಕೊಟ್ಟಾಯಂ 4729, ಇಡುಕ್ಕಿ 272, ಎರ್ನಾಕುಳಂ 2000, ತ್ರಿಶೂರ್ 1302, ಪಾಲಕ್ಕಾಡ್ 481, ಮಲಪ್ಪುರಂ 704, ಕೋಝಿಕೋಡ್ 1567, ವಯನಾಡ್ 233, ಕಣ್ಣೂರು 623, ಕಾಸರಗೋಡು 602 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 2,47,181 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 12,07,680 ಮಂದಿ ಜನರನ್ನು ಕೋವಿಡ್ ನಿಂದ ಮುಕ್ತಗೊಳಿಸಲಾಗಿದೆ.

         ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 5,27,662 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 5,06,202 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ  ಮತ್ತು 21,460 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 3,645 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

          ಇಂದು 40 ಹೊಸ ಹಾಟ್‍ಸ್ಪಾಟ್‍ಗಳಿವೆ. 3 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 587 ಹಾಟ್‍ಸ್ಪಾಟ್‍ಗಳಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries