HEALTH TIPS

ಏ.7ರಂದು 'ಪರೀಕ್ಷಾ ಪೆ ಚರ್ಚಾ' ಸಂವಾದ ಕಾರ್ಯಕ್ರಮ: ಮೋದಿ

           ನವದೆಹಲಿ: 'ವಿದ್ಯಾರ್ಥಿಗಳೊಂದಿಗಿನ 'ಪರೀಕ್ಷಾ ಪೆ ಚರ್ಚಾ' ವಾರ್ಷಿಕ ಸಂವಾದ ಕಾರ್ಯಕ್ರಮವನ್ನು ಇದೇ 7 ರಂದು ಹೊಸ ಸ್ವರೂಪದಲ್ಲಿ ನಡೆಸಲಾಗುವುದು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಿಳಿಸಿದರು.


         ಈ ಬಾರಿಯ 'ಪರೀಕ್ಷಾ ಪೆ ಚರ್ಚಾ' ವೇಳೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತಾಗಿ ಆಸಕ್ತಿದಾಯಕ ಪ್ರಶ್ನಾವಳಿಗಳು ಮತ್ತು ಎಕ್ಸಾಂ ವಾರಿಯರ್ಸ್‌, ಪೋಷಕರು ಮತ್ತು ಶಿಕ್ಷಕರೊಂದಿಗೆ ಮಹತ್ವಪೂರ್ಣ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು. ಈ ಕಾರ್ಯಕ್ರಮವು ಏಪ್ರಿಲ್‌ 7ರಂದು ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ 'ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ಕೋವಿಡ್‌ ದೃಷ್ಟಿಯಿಂದ ಈ ಬಾರಿಯ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಡೆಸುವುದಾಗಿ ಸರ್ಕಾರ ಈ ಹಿಂದೆ ಹೇಳಿತ್ತು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries