HEALTH TIPS

ಖ್ಯಾತ ಮಲೆಯಾಳಿ ಶಿಶುಸಾಹಿತಿ ಸುಮಂಗಲ ವಿಧಿವಶ

                                       

           ತ್ರಿಶೂರ್: ಖ್ಯಾತ ಮಲೆಯಾಳ ಲೇಖಕಿ, ಶಿಶು ಸಾಹಿತಿ ಸುಮಂಗಲ (ಲೀಲಾ ನಂಬೂದಿರಿಪಾಡ್) ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 

               ದೈಹಿಕ ಸಮಸ್ಯೆಗಳಿಂದಾಗಿ ಸುಮಂಗಲಾ ದೀರ್ಘಕಾಲಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಸಂಜೆ ಪರಮೆಕ್ಕಾವು ಶಾಂತಿ ಗೇಟ್‍ನಲ್ಲಿ ನಡೆಯಿತು. ಪಂಚತಂತ್ರಂ, ಮಿಥೈಪೋತಿ ಮತ್ತು ಮಂಜಾಡಿಕುರು ಅವರ ಪ್ರಮುಖ ಕೃತಿಗಳಾಗಿವೆ.

                 ಅವರು 1934 ರಲ್ಲಿ ಪಾಲಕ್ಕಾಡ್ ಜಿಲ್ಲೆಯ ವೆಲ್ಲಿನೆಳಿಯಲ್ಲಿ ಜನಿಸಿದರು, ವಿದ್ವಾಂಸ ಮತ್ತು ಕವಿ ಒಎಂಸಿ ನಂಬೂದಿರಿಪಾಡ್ ಮತ್ತು ಉಮಾ ಅಂತರ್ಜನ ದಂಪತಿಗಳ  ಹಿರಿಯ ಮಗಳು. ಒಟ್ಟಪಾಲಂ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದಿದ್ದರು. 

              ಸುಮಂಗಲ 1948 ರಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣನಾಗಿ ತನ್ನ ತಂದೆಯಿಂದ  ಸಂಸ್ಕøತ ಮತ್ತು ಇಂಗ್ಲಿಷ್ ಅಧ್ಯಯನ ಮಾಡಿದರು. ಅವರು ದೇಶಮಂಗಲಂ ಮನಕ್ಕಲ್ ಅಷ್ಟಮೂರ್ತಿ ನಂಬೂತಿರಿಯನ್ನು ಹದಿನೈದನೇ ವಯಸ್ಸಿನಲ್ಲಿ ವಿವಾಹವಾದರು.

               ಕೇರಳ ಕಲಾಮಂಡಲದಲ್ಲಿ ಪುಟ್ಟ ಉದ್ಯೋಗ ಪಡೆದ ಅವರು ಬಳಿಕ  ಅಲ್ಲಿ ಪ್ರಚಾರ ಅಧಿಕಾರಿಯಾಗಿದ್ದರು. ಸಣ್ಣಕಥೆಗಳು ಮತ್ತು ಕಾದಂಬರಿಗಳ ಜೊತೆಗೆ ಮಕ್ಕಳಿಗಾಗಿ ಐವತ್ತಕ್ಕೂ ಹೆಚ್ಚು ಶಿಶು ಸಾಹಿತ್ಯ ಕೃತಿಗಳನ್ನೂ  ಸಣ್ಣ ಕಾದಂಬರಿಗಳನ್ನು ಬರೆದಿದ್ದಾರೆ.  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಅವರಿಗೆ ಲಭ್ಯವಾಗಿದ್ದವು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries