HEALTH TIPS

ಕೇರಳದಲ್ಲಿ ಮೊದಲ ಬಾರಿಗೆ ಐದು ಸಾವಿರ ಕೋವಿಡ್ ರೋಗಿಗಳು ಪತ್ತೆಯಾದ ಜಿಲ್ಲೆ ಕೋಝಿಕ್ಕೋಡ್ ಏಳು ಜಿಲ್ಲೆಗಳಲ್ಲಿ ಹಠಾತ್ ಏರಿಕೆ

                

            ತಿರುವನಂತಪುರ: ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿನ್ನೆ ರಾಜ್ಯದಲ್ಲೇ ಅತಿ ಹೆಚ್ಚು ಕೋವಿಡ್ ರೋಗಿಗಳಿರುವುದು ದಾಖಲಾಗಿ ಕಳವಳ ಮೂಡಿಸಿದೆ. ಕೋಝಿಕ್ಕೋಡ್ ಜಿಲ್ಲೆಯೊಂದರಲ್ಲೇ ನಿನ್ನೆ 5015 ಮಂದಿ ಜನರಿಗೆ ಕೋವಿಡ್ ಬಾಧಿಸಿರುವುದು ದೃಢಪಟ್ಟಿದೆ. ಒಂದು ಜಿಲ್ಲೆಯಲ್ಲಿ ದಿನಕ್ಕೆ ಐದು ಸಾವಿರಕ್ಕೂ ಹೆಚ್ಚು ರೋಗಿಗಳ ಸಂಖ್ಯೆ ತಲುಪುವುದು ರಾಜ್ಯದಲ್ಲಿ ಇದೇ ಮೊದಲು. ಎರ್ನಾಕುಳಂನಲ್ಲಿ 4,000 ಕ್ಕೂ ಹೆಚ್ಚು ರೋಗಿಗಳಿದ್ದಾರೆ. ರಾಜ್ಯದಲ್ಲಿ ಒಟ್ಟು 32,819 ಮಂದಿ ಜನರಿಗೆ ನಿನ್ನೆ ಸೋಂಕು ಪತ್ತೆಯಾಗಿದೆ.

              ಕೋಝಿಕೋಡ್ 5015, ಎರ್ನಾಕುಲಂ 4270, ಮಲಪ್ಪುರಂ 3251, ತ್ರಿಶೂರ್ 3097, ಕೊಟ್ಟಾಯಂ 2970, ತಿರುವನಂತಪುರ 2892, ಪಾಲಕ್ಕಾಡ್ 2071, ಕಣ್ಣೂರು 1996, ಆಲಪುಳ 1770, ಕೊಲ್ಲಂ 1591, ಪತ್ತನಂತಿಟ್ಟು 1163, ವಯನಾಡ್ 968, ಕಾಸರಗೋಡು 906, ಇಡುಕ್ಕಿ 859 ಮಂದಿ ಸೋಂಕಿತರನ್ನು ನಿನ್ನೆ ಪತ್ತೆಹಚ್ಚಲಾಗಿದೆ.  1,41,199 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಪರೀಕ್ಷಾ ಸಕಾರಾತ್ಮಕತೆ ದರ 23.24 ಶೇ.ಇತ್ತು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries