ಕಾಸರಗೋಡು: ಕೋವಿಡ್ 19 ರೋಗ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏ.24,25ರಂದು ಅನಿವಾರ್ಯ ಮತ್ತು ತುರ್ತು ಸೇವೆಗಳಿಗೆ ಮಾತ್ರ ಅನುಮತಿಯಿದೆ ಎಂದು ಸರಕಾರದ ಪ್ರಧಾನ ಕಾರ್ಯದರ್ಶಿ ಪ್ರಕಟಿಸಿರುವ ಆದೇಶ ತಿಳಿಸಿದೆ.
ಏ.24ರಂದು ಸರ್ಕಾರಿ ಬಸ್ ಗಳು, ಬ್ಯಾಂಕ್ ಗಳು, ಸಾರ್ವಜನಿಕ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಇತ್ಯಾದಿಗಳಿಗೆ ರಜೆ ಸಾರಲಾಗಿದೆ.
ಅಂದು ಅನುಮತಿಯಿರುವ ತುರ್ತು ಮತ್ತು ಅನಿವಾರ್ಯ ಸೇವೆಗಳು ಇಂತಿವೆ:
1. ಅನಿವಾರ್ಯ ಮತ್ತು ತುರ್ತು ಸೇವೆಗಳು, ಕೋವಿಡ್-19 ಪ್ರತಿರೋಧ ಸಂಬಮದ ಎಲಲ್ ಕೇಂದ್ರ-ರಾಜ್ಯ ಸರಕಾರಿ ಕಚೇರಿಗಳು, ಅವುಗಳ ಸ್ಥಳೀಯಾಡಳಿತ ಸಂಸ್ಥೆಗಳು, ನಿಗಮಗಳು ಪೂರ್ಣರೂಪದಲ್ಲಿ ತೆರೆದು ಕಾರ್ಯಾಚರಿಸಲಿವೆ. ಇವುಗಳ ಅಧಿಕಾರಿಗಳು/ ಸಿಬ್ಬಂದಿಗೆ ಸಂಚಾರಕ್ಕೆ ತಡೆಯಿಲ್ಲ.
2. ಪೂರ್ಣಾವಧಿ ಚಟುವಟಿಕೆ ನಡೆಸುವ ಅನಿವಾರ್ಯ, ತುರ್ತು ಸೇವೆಗಳನ್ನು ನಡೆಸುವ ಉದ್ದಿಮೆಗಳು/ ಕಂಪಬನಿಗಳು/ ಸಂಘಟನೆಗಳು ಇತ್ಯಾದಿ ತೆರೆದು ಕಾರ್ಯಾಚರಿಸಬಹುದು. ಇವಿಗಳ ಸಿಬ್ಬಂದಿ ಸಂಸ್ಥೆ/ ಸಂಘಟನೆ ನೀಡುವ ಗುರುತುಚೀಟಿ ತೊರಿಸಿದಲ್ಲಿ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು.
3. ಟೆಲಿಕಾಂ, ಇಂಟರ್ ನೆಟ್ ಸೇವೆಗಳ ಸಿಬ್ಬಂದಿ ಮತ್ತು ವಾಹನಗಳಿಗೆ ಸಂಸ್ಥೆ ನಬೀಡುವ ಗುರುತುಚೀಟಿ ತೋರಿದಲ್ಲಿ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು.
4. ತುರ್ತು ಚಿಕಿತ್ಸಾ ಅಗತ್ಯಕ್ಕೆ ತೆರಳುವ ರೋಗಿಗಳು, ಅವರ ಸಹಾಯಕರು, ಸಂಬಂಧಿಕರು ತತ್ಸಂಬಂಧಿ ದಾಖಲಾತಿ ಪತ್ರಗಳನ್ನು ತೋರಿಸಿದರೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು. ವಾಕ್ಸಿನೇಷನ್ ಪಡೆಯುವ ಮಂದಿ ತಮ್ಮ ಯಾವುದಾದರೂ ಗುರುತು ಚೀಟಿ ತೋರಿದರೆ ಪ್ರಯಣಕ್ಕೆ ಅನುಮತಿಇರುವುದು. 5. ಆಹಾರ ವಸ್ತುಗಳು, ಹಣ್ಣು, ತರಕಾರಿ, ಹಾಲು, ಮಾ<ಸ, ಮೀನು ಇತ್ಯಾದಿ ಮಾರಾಟದ ಅಂಗಡಿಗಳಿಗೆ ಮಾತ್ರ ಅಂದು ತೆರೆದು ಕಾರ್ಯಾಚರಿಸಲು ಅನುಮತಿಯಿದೆ. ಜನ ಮನೆಗಳಿಂದ ಹೊರಬರದಂತೆ ಹೋಂ ಡೆಲಿವರಿ ಸೌಲಭ್ಯಕ್ಕೆ ಗರಿಷ್ಠ ಮಟ್ಟದಲ್ಲಿ ಪೆÇ್ರೀತ್ಸಾಹ ನೀಡಲಾಗುವುದು. ಈ ಚಟುವಟಿಕೆಗಳು ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿ ನಡೆಯಬೇಕು.
6. ಹೋಟೆಲ್ ಗಳು, ರೆಸ್ಟಾರೆಂಟ್ ಗಳಲ್ಲಿ ಟೇಕ್ ಎವೇ ಕೌಂಟರ್ ಗಳು, ಹೋಂ ಡೆಲಿವರಿ ಇತ್ಯಾದಿಗಳಿಗೆ ಮಾತ್ರ ಅನುಮತಿಯಿರುವುದು.
7. ದೀರ್ಘಗಾಮಿ ಬಸ್ ಸೇವೆಗಳು, ರೈಲು ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ಇತ್ಯಾದಿಗಳಲ್ಲಿ ಪ್ರಯಾಣ ಸೌಲಭ್ಯಕ್ಕಾಗಿ ಸಾರ್ವಜನಿಕ ಸಂಚಾರಿ ವಾಹನ, ಖಾಸಗಿ ವಾಹನಗಳ ಸೌಲಭ್ಯಕ್ಕೆ ಅನುಮತಿಯಿದೆ. ಈ ಪ್ರಯಾಣಿಕರು ಯಾತ್ರಾ ದಾಖಲಾತಿ ಪತ್ರಗಳು, ಟಿಕೆಟ್ ಇತ್ಯಾದಿ ಬಳಿ ಇರಿಸಿಕೊಳ್ಳಬೇಕು ಮತ್ತು ಕೋವಿಡ್ ಸಂಹಿತೆ ಪಾಲಿಸಬೇಕು.
8. ಕೋವಿಡ್ ಜಾಗ್ರತಾ ಪೆÇೀರ್ಟಲ್ ನಲ್ಲಿ ಮುಂಗಡ ನೋಂದಣಿ ನಡೆಸಿ, ಕೋವಿಡ್ ಸಂಹಿತೆ ಪಾಲಿಸಿ ವಿವಾಹ, ಗೃಹಪ್ರವೇಶ ಇತ್ಯಾದಿ ಸಮಾರಂಭಗಳನ್ನು ನಡೆಸಬೇಕು.






