ಕಾಸರಗೋಡು : ರಾಜ್ಯ ಸರ್ಕಾರದ ನೂತನ ಆದೇಶ ಪ್ರಕಾರ ಏ.23ರಿಂದ ಕಾಸರಗೋಡು ಜಿಲ್ಲೆಯಲ್ಲಿ ಎರಡನೇ ಡೋಸ್ ವಾಕ್ಸಿನೇಷನ್ ಪಡೆಯಲು ಕೋವಿಡ್ ಸೈಟ್ ನಲ್ಲಿ ಮುಂಗಡ ನೋಂದಣಿ ಕಡ್ಡಾಯವಾಗಿ ನಡೆಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಎರಡನೇ ಡೋಸ್ ಪಡೆಯುವ ಕಾಲಾವಧಿಗೆ ಮುನ್ನ ಆನ್ ಲೈನ್ ನೋಂದಣಿ ಲಭ್ಯವಾಗದಿದ್ದಲ್ಲಿ ಮಾತ್ರ ಸ್ಪಾಟ್ ರೆಜಿಸ್ಟ್ರೇಷನ್ ನಡೆಸಿ ವಾಕ್ಸಿನೇಷನ್ ನೀಡಲಾಗುವುದು ಎಂದು ಅವರು ತಿಳಿಸಿದರು.





