ಕಾಸರಗೋಡು: ರಾಜ್ಯ ಸರಕಾರ ಜಾರಿಗೊಇಳಿಸಿರುವ ಕೋವಿಡ್ ಪ್ರತಿರೋಧ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಕಾಸÀರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಲು ಕೊರೋನಾ ಕೋರ್ ಸಮಿತಿ ಸಭೆ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಲ್ಲಿ ಆರೋಗ್ಯ ಬ್ಲೋಕ್ ಗಳ ತಳಹದಿಯಲ್ಲಿ ಸಿ.ಎಫ್.ಎಲ್.ಟಿ.ಸಿ.ಗಳನ್ನು ಆರಂಭಿಸಲಾಗುವುದು. ಪ್ರಧಾನ ವ್ಯಾಪಾರ ಕೇಂದ್ರಗಳಲ್ಲಿ ಪ್ರವೇಶಾತಿ ನಿಯಂತ್ರಣ ಏ.24ರಂದು ಆರಂಭಗೊಳ್ಳಲಿದೆ. ಅಂತಿಮ ತೀರ್ಮಾನ ಏ.23ರಂದು ಸಂಜೆ ಸೇರಲಾಗುವ ಜಿಲ್ಲಾ ಪಿಡುಗು ನಿವಾರಣೆ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ಸಭೆ ತಿಳಿಸಿದೆ.
ಎಲ್ಲ ಸ್ಥಳೀಯಾಡಳಿತ ಸಂಸ್ಥೇಗಳಲ್ಲೂ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಡೊಮಿಸಲರಿ ಕೇರ್ ಸೆಂಟರ್ ಗಳನ್ನು ಆರಂಭಿಸಲಾಗುವುದು. ಇಲ್ಲಿ 25 ಬೆಡ್ ಗಳ ವರೆಗೆ ಸಜ್ಜುಗೊಳಿಸಲಾಗುವುದು.ಕೋವಿಡ್ ಬಾಧಿತರಾಗಿರುವ, ಮನೆಗಳಲ್ಲಿ ಸೌಲಭ್ಯಗಳಿಲ್ಲದೇ ಇರುವ ಮಂದಿಗಾಗಿ ಈ ಸೌಲಭ್ಯ ಬಳಸಬಹುದಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಇವುಗಳ ಮೇಲ್ನೋಟವಹಿಸುವರು.
ಬ್ಲಾಕ್ ಮಟ್ಟದಲ್ಲಿ ಕಂಟ್ರೋಲ್ ಸೆಲ್ ಗಳು ಚಟುವಟಿಕೆ ಆರಂಭಿಸಿವೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ತಿಳಿಸಿದರು. ವೈದ್ಯಧಿಕಾರಿ, ಆರೋಗ್ಯ ಇನ್ಸ್ ಪೆಕ್ಟರರು, ಸಹಾಯಕ ಸರ್ಜನ್ ಮೊದಲಾದವರ ಮೇಲ್ನೋಟದಲ್ಲಿ ಬ್ಲೋಕ್ ಮಟ್ಟದ ಕಂಟ್ರಲ್ ಸೆಲ್ ಗಳು ಚಟುವಟಿಕೆ ನಡೆಸಲಿವೆ. ಪ್ರತಿದಿನ ರೋಗಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಬಹುದಾದ ಡಾಟಾ ಎಂಟ್ರಿ ಆಪರೇಟರ್, ಸರಕಾರಿ ಸಿಬ್ಬಂದಿ, ಶಿಕ್ಷಕ ಅವರ ಸೇವೆ ಲಭ್ಯವಾಗಲಿದೆ.
ಕೋವಿಡ್ ತಪಾಸಣೆ ಹೆಚ್ಚಳ:
ಕೋವಿಡ್ ತಪಾಸಣೆ ಹೆಚ್ಚಳಗೊಳಿಸಲು ಸಭೆ ತೀಎರ್ಮಾನಿಸಿದೆ. ಕೋವಿಡ್ ರಓಗಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 45 ವರ್ಷಕಿಂತ ಅಧಿಕ ವಯೋಮಾನದ ಮಂದಿಗೆ ವಾಕ್ಸಿನೇಷನ್ ಹೆಚ್ಚುವರಿಯಾಗಿ ಒದಗಿಸಲು ಮತ್ತು ಸೆಕ್ಟರ್ ಮೆಜಿಸ್ಟ್ರೇಟ್ ಗಳ ಚಟುವಟಿಕೆ ಚುರುಕುಗೊಳಿಸಲು ಜಿಲ್ಲಾಧಿಕಾರಿ ಆದೇಶ ನೀಡಿದರು. ಮೊಬೈಲ್ ತಪಾಸಣೆ ಘಟಕದ ಚಟುವಟಿಕೆ ಪ್ರಬಲಗೊಳಿಸಲು ತೀರ್ಮಾನಿಸಲಾಗಿದೆ.
14 ದಿನಗಳ ಅವಧಿಗೆ ವಾಹನ ಚಾಲನೆ ಪರೀಕ್ಷೆ ಮುಂದೂಡಿಕೆ
ಜಿಲ್ಲೆಯ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಡ್ರೈವಿಂಗ್ ಟೆಸ್ಟ್ 14 ದಿನಗಳ ಮಟ್ಟಿಗೆ ಮುಂದೂಡಲು ತೀರ್ಮಾನಿಸಲಾಗಿದೆ. ಪ್ರತಿವಾರ ಮನೆಗಳ್ಲೇ ಕುಳಿತು ಕೆಲಸ ಮಾಡಬೇಕಾದ ಸಿಬ್ಬಂದಿಯ ಮಾಹಿತಿಯನ್ನು ಹೆಚ್ಚುವರಿ ದಂಡನಾಧಿಕಾರಿಗೆ ಹಸ್ತಾಂತರಿಸುವಂತೆ ಸಭೆ ತಿಳಿಸಿದೆ.
ವಾರ್ಡ್ ಮಟ್ಟದ ಜಾಗೃತಾ ಸಮಿತಿಗಳ ಚಟುವಟಿಕೆ ಚುರುಕುಗೊಳಿಸಲು ನಿರ್ಧಾರ:
ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳ ಚಟುವಟಿಕೆ ಚುರುಕುಗೊಳಿಸಲು ನಿರ್ಧರಿಸಲಾಗಿದೆ. ಮಾಸ್ಟರ್ ಯೋಜನೆಯ ಶಿಕ್ಷಕರ ಚಟುವಟಿಕೆ ಪ್ರಬಲಗೊಳಿಸಲೂ ತೀರ್ಮಾನಿಸಲಾಗಿದೆ. 45ಕ್ಕಿಂತ ಅಧಿಕ ವಯೋಮಾನದ ಮಂದಿಯಲ್ಲಿ ವಾಕ್ಸಿನೇಷನ್ ನಡೆಸದೇ ಇರುವವರ ಪತ್ತೆ ಮಾಡಲು ಮಾಸ್ಟರ್ ಯೋಜನೆಯ ಶಿಕ್ಷಕರು ರಂಗಕ್ಕಿಳಿಯುವರು.
ಅತಿಥಿ ಕಾರ್ಮಿಕರ ದುಡಿಮೆಗೆ ಜಿಲ್ಲೆಯಲ್ಲಿ ಸೌಲಭ್ಯ
ಇತರ ರಾಜ್ಯಗಳ ಕಾರ್ಮಿಕರಿಗೆ ಕಾರ್ಮಿಕತ ನಡೆಸಲು ಬೇಕಾದ ಸೌಲಭ್ಯಗಳನ್ನು ಒದಗಿಸಲು , ಲೇಬಕ್ಯಾರ್ಂಪ್ ಗಳಿಗೆ ಭೇಟಿ ನೀಡಿ ಸರಕಾರದ ಆದೇಶಗಳನ್ನು ಅವರಿಗೆ ತಿಳಿಸಲು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸಭೆ ಆದೇಶಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಮುಂಗಡವಾಗಿಯೇ ಜಾಗೃತಿ ಕೈಗೊಂಡು ಆಹಾರ ಕಿಟ್ ಗಳನ್ನು ಸಜ್ಜುಗೊಳಿಸಲು ಕೋರ್ ಸಮಿತಿ ಆದೆಶಿಸಿದೆ.
ನಿಯಂತ್ರಣ ಕೊಠಡಿಗಳು :
ಕೋವಿಡ್ 19 ರೋಗ ಹೆಚ್ಚಳ ನಿಯಂತ್ರಣ ನಿಟ್ಟಿನಲ್ಲಿ ಮತ್ತು ರಾಜ್ಯ ಸರಕಾರದ ಆದೇಶ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಸಲಾಗುವ ಚಟುವಟಿಕೆಗಳ ಏಕೀಕರಣ ಉದ್ದೇಶದಿಂದ 24 ತಾಸುಗಳೂ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ.
ದೂರವಾಣಿ ಸಂಖ್ಯೆಗಳು: 9496853441, 04994-257700, 04994-255280, 04994-255001, 04994-255002, 04994-255003, 04994-255004.
ಪಳ್ಳಿಕ್ಕರೆ ಬೀಚ್ ಮುಚ್ಚುಗಡೆ:
ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಪಳ್ಳಿಕ್ಕರೆ ಬೀಚ್ 14 ದಿನಗಳ ಅವಧಿಗೆ ಮುಚ್ಚುಗಡೆ ನಡೆಸುವಂತೆ ಸಭೆ ನಿರ್ಧರಿಸಿದೆ. ಸಂದರ್ಶಕರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಜಿಲ್ಲಾಧಿಕಾರಿಗೆ ಸಹಾಯ ಮಾಡಲು ಸರಕಾರಿ ನೇಮಿಸಿರುವ ಅಧಿಕಾರಿ ಜಾಫರ್ ಮಲಿಕ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಹೆಚ್ಚುವರಿ ದಂಡನಧಿಕಾರಿ ಅತುಲ್ ಎಸ್.ನಾಥ್, ಕೊರೋನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.







