ತಿರುವನಂತಪುರ: ಮಾಸ್ಕ್ ಧರಿಸದವರನ್ನು ಮತ್ತು ಗುಂಪುಗೂಡುವವರನ್ನು ದೈಹಿಕವಾಗಿ ಎದುರಿಸುತ್ತೇವೆ ಎಂದು ಕೇರಳ ಪೋಲೀಸರು ಬಹಿರಂಗವಾಗಿ ಸಾರಿ ಹೇಳಿರುವರು.
ಕೇರಳ ಪೋಲೀಸರ ಅಧಿಕೃತ ಫೇಸ್‍ಬುಕ್ ಪೋಸ್ಟ್‍ನಲ್ಲಿ ಹಂಚಿಕೊಂಡಿರುವ ಟ್ರೋಲ್ ಮೂಲಕ ಪೋಲೀಸರು ಈ ಬಗ್ಗೆ ಎಚ್ಚರಿಕೆಯ ಮಾಹಿತಿ ನೀಡಿದರು.
ಗಡ್ಡದ ಮೇಲೆ ಅನಗತ್ಯವಾಗಿ ಮಾಸ್ಕ್ ಧರಿಸಿ ತಿರುಗಾಡುವ ಜನರು ಇನ್ನೂ ಇದ್ದಾರೆ. ಅಗತ್ಯವಿದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ನಾವು ಶಿಸ್ತಿನ ಕಾನೂನು ಮತ್ತು ಅಗತ್ಯವಿದ್ದರೆ ದೈಹಿಕ ಚಿಕಿತ್ಸೆಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೋಲೀಸರ ಫೇಸ್‍ಬುಕ್ ಪೋಸ್ಟ್ ಹೇಳುತ್ತದೆ.
ನೀವು ಇನ್ನೂ ಕೇಳದಿದ್ದರೆ ನಾವು ಕೇಳಿಸುತ್ತೇವೆ ಈ ಬಗ್ಗೆ ಮಾಮನ ಬಗ್ಗೆ ಬೇರೇನೂ ಗ್ರಹಿಸಬೇಡಿ ಎಂದು ಪೋಸ್ಟ್ ನ ಶೀರ್ಷಿಕೆ. ಇದೇ ವೇಳೆ ಪರಿಸ್ಥಿತಿಯು ಪೋಲೀಸರನ್ನು ನಾಗರಿಕರ ಬೇಟೆಯಾಡುವ ಘಟನೆಗಳಿಗೆ ಪರಿವರ್ತಿಸಬಹುದೆಂಬ ಆತಂಕಗಳಿವೆ.





