ತಿರುವನಂತಪುರ: ಅಂತರ್ ರಾಜ್ಯ ಪ್ರಯಾಣದ ಮೇಲೆ ಕೇರಳ ಕೂಡ ತನ್ನ ನಿಯಂತ್ರಣ ಬಿಗಿಗೊಳಿಸುತ್ತಿದೆ. ವಾಳಯಾರ್ ಗಡಿಯ ಮೂಲಕ ಕೇರಳಕ್ಕೆ ಪ್ರವೇಶಿಸಲು ವಿಜಿಲೆನ್ಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಮತ್ತು ಪೊಲೀಸರು ತಿಳಿಸಿದ್ದಾರೆ. ನಾಳೆಯಿಂದ ತಪಾಸಣೆ ಬಿಗಿಗೊಳಿಸಲಾಗುವುದು. ನೋಂದಣಿ ಇಲ್ಲದೆ ಗಡಿಗೆ ಬರಬೇಕಾಗಿಲ್ಲ , ಆದ್ದರಿಂದ ನೋಂದಣಿ ನಂತರವಷ್ಟೇ ಗಡಿದಾಟಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದ ಹೊರಗಿನಿಂದ ಮತ್ತು ಇತರ ರಾಜ್ಯಗಳಿಂದ ಬರುವವರಿಗೆ ಕೊರೋನಾ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದ್ದು ಈ ಎಚ್ಚರಿಕೆ ನೀಡಲಾಗಿದೆ. ಇತರ ರಾಜ್ಯಗಳಿಂದ ಬರುವವರು ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಪೂರ್ಣಗೊಳಿಸಬೇಕು. ಆಗಮಿಸುವ 48 ಗಂಟೆಗಳ ಮೊದಲು ಮಾಡಿರುವ ವರದಿ ಅಥವಾ ತಕ್ಷಣ ಪರಿಶೀಲಿಸಿದ ವರದಿ ಹಾಜರುಪಡಿಸಬೇಕು.ತಕ್ಷಣ ಮಾಡಿದ ಪರೀಕ್ಷಾ ವರದಿಯಾದರೆ ಫಲಿತಾಂಶ ಬರುವವರೆಗೆ ಕ್ವಾರಂಟ್ಯೆನ್ ಗೆ ಒಳಗಾಗಬೇಕು. ಲಸಿಕೆ ಹಾಕಿದವರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

