HEALTH TIPS

ಗಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

          ಮಂಜೇಶ್ವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿಗಳಾಗಿದ್ದು ಇದೀಗ ಭಡ್ತಿ ಹೊಂದಿ ಧರ್ಮಸ್ಥಳ ಕೇಂದ್ರ ಕಛೇರಿಗೆ ತೆರಳುತ್ತಿರುವ  ಚೇತನಾ ಎಂ ಇವರಿಗೆ ಬೀಳ್ಕೊಡುಗೆ ಸಮಾರಂಭವು  ಮಜಿಬೈಲ್ ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್ ನ ಸಭಾಂಗಣದಲ್ಲಿ ಗುರುವಾರ ಅಪರಾಹ್ನ ಜರಗಿತು. 


     ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಪಾಡಿ ಒಕ್ಕೂಟದ ವಿವಿಧ ಸಂಘಗಳ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ  ಮೀಂಜ ಪಂ.ಅಧ್ಯಕ್ಷೆ ಸುಂದರಿ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಹಮೀದ್ ಹೊಸಂಗಡಿ, ಜನ ಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಭಾಗ್, ವಿವಿಧ ರಂಗದ ನೇತಾರರಾದ ಬಿ.ವಿ.ರಾಜನ್, ಹರೀಶ್ಚಂದ್ರ ಮಂಜೇಶ್ವರ, ಸಂಕಬೈಲ್ ಸತೀಶ್ ಅಡಪ , ಪುಷ್ಪರಾಜ್ ಐಲ್,  ಗೋಪಾಲ ಶೆಟ್ಟಿ ಅರಿಬೈಲ್, ರಾಮಕೃಷ್ಣ ಕಡಂಬಾರ್, ಹರೀಶ್ ಶೆಟ್ಟಿ ಮಾಡ, ವೀರ ಭಾಸ್ಕರ್ ಮಂಜೇಶ್ವರ,ಯಾದವ ಬಡಾಜೆ, ಮಾಧವ, ಸೃಷ್ಠಿ ಕಲಾಭೂಮಿ ಬೆಂಗಳೂರಿನ ಸ್ಥಾಪಕಾಧ್ಯಕ್ಷ ಸಂಕಬೈಲ್ ಮಂಜುನಾಥ ಅಡಪ,ಕಟೀಲೇಶ್ವರೀ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ, ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ಕೌಡೂರುಬೀಡು ಯತೀಶ್ ಭಂಡಾರಿ,ರಾಮಕೃಷ್ಣ ಸಂತಡ್ಕ, ಎಸ್.ಎನ್.ಕಡಂಬಾರ್ ಮೊದಲಾದವರು ಭಾಗವಹಿಸಿದ್ದರು. 


      ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪರವಾಗಿ ಚೇತನಾ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಇತರೆಡೆಗೆ ವರ್ಗಾವಣೆಗೊಳ್ಳುತ್ತಿರುವ ಮೇಲ್ವಿಚಾರಕರಾದ  ಮೋಹನ್ ಕಣಿಯೂರು, ಲತಾ ಅವರನ್ನು ಅಭಿನಂದಿಸಲಾಯಿತು. ಅಭಿನಂದನೆಯನ್ನು ಪಡೆದುಕೊಂಡ ಚೇತನ ಅವರು ಕೃತಜ್ಞತಾಭಾವದಿಂದ ಮಾತನಾಡಿದರು. ಜನಜಾಗೃತಿ ವೇದಿಕೆಯ ಹರೀಶ್ ಶೆಟ್ಟಿ ಕಡಂಬಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries