ಕಾಸರಗೋಡು: ಕುಟುಂಬಶ್ರೀಯ ನೇತೃತ್ವದಲ್ಲಿ ಶಾಲಾ ಪಠ್ಯಪುಸ್ತಕಗಳ ವಿತರಣೆ ಜೂ.10ರ ಮುಂಚಿತವಾಗಿ ಪೂರ್ಣಗೊಳಿಸಲಾಗುವುದು.
ಕಾಸರಗೋಡು ಜಿಲ್ಲೆಯಲ್ಲಿ ವಿತರಣೆಗಾಗಿ ಆಗಮಿಸಿರುವ 11,96,783 ಪುಸ್ತಕಗಳಲ್ಲಿ ಇನ್ನು ಒಂದು ಲಕ್ಷಕ್ಕಿಂತ ಕಡಿಮೆ ಪುಸ್ತಕಗಳಷ್ಟೇ ವಿತರಣೆಗೆ ಬಾಕಿಯಿವೆ. ಕೇರಳ ಬುಕ್ಸ್ ಆಂಡ್ ಪಬ್ಲಿಕೇಷನ್ ಸೊಸೈಟಿ(ಕೆ.ಬಿ.ಪಿ.ಎಸ್.) ಯಿಂದ ಜೂ.3 ರಂದು ಕೊನೆಯ ಲೋಡ್ ಆಗಮಿಸಿದೆ. ಜೂ.10ರ ಮುಂಚಿತವಾಗಿ ಒಂದರಿಂದ ಹತ್ತನೇ ತರಗತಿ ವರೆಗಿನ ಪಠ್ಯಪುಸ್ತಕಗಳನ್ನು ವಿತರಿಸುವ ಮೂಲಕ ಕುಟುಂಬಶ್ರೀ ಚಟುವಟಿಕೆಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾ ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್ ತಿಳಿಸಿದರು.
2020-21ರಲ್ಲಿ ಪಠ್ಯಪುಸ್ತಕಗಳ ವಿತರಣೆಯ ಹೊಣೆಗಾರಿಕೆಯಲ್ಲಿ ಅಧಾರ್ಂಶವನ್ನು ಕುಟುಂಬಶ್ರೀ ಜಿಲ್ಲಾ ಮಿಷನ್ ಗೆ ಸರಕಾರ ವಹಿಸಿತ್ತು. 2021-22ರ ಪುಸ್ತಕವಿತರಣೆಯ ಹೊಣೆಯನ್ನು ಪೂರ್ಣರೂಪದಲ್ಲಿ ಕುಟುಂಬಶ್ರೀಗೆ ವಹಿಸಲಾಗಿದೆ. ಪಠ್ಯಪುಸ್ತಕಗಳ ವಿಂಗಡಣೆ, ಲೋಡ್ ಹೇರಿಕೆ, ಇಳಿಸುವಿಕೆ, ಸಂಚಾರ, ಮೇಲ್ವಿಚಾರಣೆ ಹೀಗೆ ಎಲ್ಲ ಹೊಣೆಯನ್ನೂ 16 ಮಂದಿ ಕಾರ್ಮಿಕರ ಸಹಿತದ ಕುಟುಂಬಶ್ರೀ ತಂಡಕ್ಕೆ ಹೊಣೆಗಾರಿಕೆ ನೀಡಲಾಗಿದೆ.
ಮಾ.15ರಂದು ಚೆರ್ಕಳ ಸೆಂಟ್ರಲ್ ಶಾಲೆಯಲ್ಲಿ ಮೊದಲ ಪುಸ್ತಕ ವಿತರಣೆ ನಡೆದಿದೆ. ಕೆ.ಬಿ.ಪಿ.ಎಸ್.ನಿಂದ 10, 27,222 ಪಠ್ಯಪುಸ್ತಕಗಳು ವಿತರಣೆಗಾಗಿ ಕಾಸರಗೋಡು ಜಿಲ್ಲೆಗೆ ಆಗಮಿಸಿವೆ. ಏ.20ರ ಮುಂಚಿತವಾಗಿ 7,54,184 ಪಠ್ಯಪುಸ್ತಕಗಳ ವಿತರಣೆಯ ಮೊದಲ ಹಂತ ಪೂರ್ಣಗೊಳಿಸಲಾಗಿದೆ. ಕೆ.ಬಿ.ಪಿ.ಎಸ್.ನಿಂದ ಪಠ್ಯಪುಸ್ತಕಗಳು ವಿತರಣೆಗೊಂಡ ತಕ್ಷಣ ಪುಸ್ತಕಗಳು ತಲಪಿವೆ. ಕುಟುಂಬಶ್ರೀ ಕಾರ್ಮಿಕರು ಬೆಳಗಿನ ಜಾವದಿಂದ ತಡರಾತ್ರಿ ವರೆಗೆ ರಜಾದಿನಗಳಲ್ಲೂ ಪುಸ್ತಕ ರವಾನೆ ನಡೆಸಿದ್ದಾರೆ.



