ಕಾಸರಗೋಡು: ಹರಿತ ಕೇರಳಂ ಯೋಜನೆಯ ಅಂಗವಾಗಿ ಕಾಞಂಗಾಡಿನ ಅಲಾಮಿ ಕುಳಂ(ಕೆರೆ) ಪುನಶ್ಚೇತನಗೊಳ್ಳಲಿದೆ.
ತ್ಯಾಜ್ಯ ತುಂಬಿ, ಆವರಣದಲ್ಲಿ ಕಾಡು ಪೆÇದೆ ಬೆಳೆದು ವಿನಾಶದ ಅಂಚಿನಲ್ಲಿದ್ದ ಈ ಕೆರೆ ಪುನಶ್ಚೇತನಗೊಳ್ಳುತ್ತಿದೆ. ಈ ಮೂಲಕ ಅಲಾಮಿಪಳ್ಳಿ ಬಸ್ ನಿಲ್ದಾಣಕ್ಕೆ ಅಗತ್ಯವಿರುವ ನೀರು ಈ ಕೆರೆಯಿಂದ ಪೂರೈಕೆಯಾಗಲಿದೆ. ಹಿಂದೆ ಸ್ಥಳೀಯ ಮಟ್ಟದ ಕೃಷಿಗೆ ಈ ಕೆರೆಯ ನೀರು ಬಳಕೆಯಾಗುತ್ತಿತ್ತು.
( ಈಗ ಹೀಗಿದೆ)ಅನೇಕ ವರ್ಷಗಳಿಂದ ಈ ಕೆರೆಯ ಶುದ್ಧೀಕರಣಕ್ಕೆ ಸಾರ್ವಜನಿಕರು ಸತತ ಮನವಿ ಸಲ್ಲಿಸುತ್ತಿದ್ದರು. ಸದ್ರಿ ಕಿರು ನೀರಾವರಿ ಇಲಾಖೆಯ ನವೀಕರಣ ಚಟುವಟಿಕೆ ನಡೆಯುತ್ತಿದೆ. ಇದರ ಅಂಗವಾಗಿ ಸುತ್ತಗೋಡೆ ಮತ್ತು ಅಲಂಕಾರ ಕಾಮಗಾರಿ ನಡೆಸಲಾಗುತ್ತಿದೆ.
ನವೀಕರಣಕ್ಕಾಗಿ 17 ಲಕ್ಷ ರೂ. ಮೀಸಲಿರಿಸಲಾಗಿದೆ. ಕರ್ಗಲ್ಲು, ಕಾಂಕ್ರೀಟು, ಕೆಂಗಲ್ಲು ಇತ್ಯಾದಿ ಬಳಸಲಾಗುತ್ತಿದೆ. ಆವರಣದಲ್ಲಿ ಹೂದೋಟ ನಿರ್ಮಾಣವೂ ನಡೆಯಲಿದೆ. ಜುಲೈ ತಿಂಗಳ ಕೊನೆಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ ಎಂದು ಕಿರು ನೀರಾವರಿ ಕಾಞಂಗಾಡು ಸಹಾಯಕ ಇಂಜಿನಿಯರ್ ಸನಲ್ ಥಾಮಸ್ ತಿಳಿಸಿದರು.
(ಹೀಗಿತ್ತು)



