ಕಾಸರಗೋಡು: ರಾಜ್ಯ ಸರಕಾರದ ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಜಾರಿಗೊಳಿಸುವ "ಪ್ರತಿ ಮನೆಯಲ್ಲೂ ಒಂದು ಪೆÇೀಷಕ ತೋಟ" ಯೋಜನೆ ಸಲುವಾಗಿ ನೀಲೇಶ್ವರ ನಗರಸಭೆಯ ಫಲಾನುಭವಿಗಳಿಗೆ ಕಿಟ್ ವಿತರಣೆ ಜರುಗಿತು.
ನಗರಸಭೆಯ ಉಪಾಧ್ಯಕ್ಷ ಪಿ.ಪಿ.ಮುಹಮ್ಮದ್ ರಾಫಿ ಉದ್ಘಾಟಿಸಿದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ವಿ.ಗೌರಿ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರ ಕೃಷಿ ಅಧಿಕಾರಿ ಷಿಜೋ ಕೆ.ಎ., ಕೃಷಿ ಸಹಾಯಕಿ ದೀಪ್ತಿ ಪಿ.ಪಿ. ಯೋಜನೆ ಬಗ್ಗೆ ಮಾಹಿತಿ ನೀಡಿದರು.
ತರಕಾರಿ, ಅಣಬೆ ಇತ್ಯಾದಿಗಳ ಕೃಷಿಗೆ ಬೇಕಾದ ಸಾಮಾಗ್ರಿಗಳಿರುವ ಕಿಟ್ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.


