ಕಾಸರಗೋಡು: ಆಮೂಲಾಗ್ರ ಬದಲಾವಣೆಯೊಂದಿಗೆ ಕಾಸರಗೋಡು ಜಿಲ್ಲಾ ಆಡಳಿತ ಕೇಂದ್ರ ಸಮಗ್ರ ಶೋಭೆ ಪಡೆದಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯದ ಆವರಣ ಶುಚೀಕರಣ ನಡೆಸಿ, ಹೂವುಗಳ ಸಸಿ ನೆಡುವಿಕೆ ಇತ್ಯಾದಿ ಸಮಗ್ರ ಸೌಂದರ್ಯೀಕರಣ ಕಾಯಕ ನಡೆಸಲಾಗಿದೆ. ವಿವಿಧ ಇಲಾಖೆಗಳು ನೆಟ್ಟ ಸಸಿಗಳು ಬೆಳೆದು ಇಂದು ಹೂವುಗಳು ಅರಳುತ್ತಿವೆ.
ಓಪನ್ ಜಿಂ ನಿಂದ ರೋಲರ್ ಸ್ಕೇಟಿಂಗ್ ವರೆಗೆ
ಜಿಲ್ಲಾಧಿಕಾರಿ ಕಚೇರಿ ಆವರಣದ ಒಂದು ಭಾಗವನ್ನು ಓಪನ್ ಜಿಂ ಗಾಗಿ ನೀಡಲಾಗಿದೆ. ಜೀವನಶೈಲಿ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ ವಲಯಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತೆ, ಆರೋಗ್ಯ ಇಲಾಖೆಯ, ಕ್ರೀಡಾ ಮಂಡಳಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಲಾದ ಆದ್ರರ್ಂ ಜಿಂ ಇಂದು ಸಾರ್ವಜನಿಕರಿಗೆ ಉಪಯುಕ್ತವಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲೂ ಜಿಂ ಆರಂಭಿಸುವ ಯೋಜನೆಯಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಾಯನ್ಮಾರುಮೂಲೆ ತನ್ ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಿಂದ ಆರಂಭಿಸಿ ಜಿಲ್ಲಾಧಿಕಚೇರಿ ಹಾದಿಯಾಗಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರ ಅಧಿಕೃತ ವಸತಿ ವರೆಗಿನ ರಸ್ತೆಯನ್ನು ರೋಲರ್ ಸ್ಕೇಟಿಂಗ್ ತರಬೇತಿಗಾಗಿ ನವೀಕರಿಸಲಾವುದು. ಇದರ ಪೂರ್ವಭಾವಿಯಾಗಿ ರಸ್ತೆಯ ಬದಿಗಳಲ್ಲಿ ಅಶೋಕ ಸಸಿಗಳನ್ನು ನೆಡುವ ಪ್ರಕ್ರಯೆ ನಡೆದುಬರುತ್ತಿದೆ.
ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬಾಪೂಜಿ ಅವರ 150ನೇ ಜನ್ಮವಾರ್ಷಿಕೋತ್ಸವ ಅಂಗವಾಗಿ ತಾಮ್ರದ ಗಾಂಧಿ ಪ್ರತಿಮೆ ಅನಾವರಣ ಈಗಾಗಲೇ ನಡೆದು ಜಿಲ್ಲಾಧಿಕಾರಿ ಕಚೇರಿಯ ಶೋಭೆ ಹೆಚ್ಚಿಸಿದೆ. 22 ಲಕ್ಷ ರೂ. ವೆಚ್ಚದಲ್ಲಿ ಶಿಲ್ಪಿ ಉಣ್ಣಿ ಕಾನಾಯಿ ಅವರು ಈ ಪ್ರತಿಮೆ ನಿರ್ಮಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಶಿರಭಾಗದಲ್ಲಿ ರಾಜ್ಯ ಸರಕಾರದ ಲಾಂಛನ ಫಲಕ ಗಮನ ಸೆಳೆಯುತ್ತಿದೆ.





