HEALTH TIPS

`ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ': ಸದಸ್ಯ ಬೆಳೆಗಾರರ ಮನೆಯ ಕೆಲಸಗಾರರಿಗೂ ಕ್ಯಾಂಪ್ಕೋ ನೆರವು

 

                ಬದಿಯಡ್ಕ: `ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ' ಎಂಬ ಧ್ಯೇಯದೊಂದಿಗೆ ತನ್ನ ಸದಸ್ಯರ ಮನೆಯ ಕೆಲಸಗಾರರ ಕುಟುಂಬಕ್ಕೂ ಕ್ಯಾಂಪ್ಕೋ ನೆರವಿನ ಹಸ್ತವನ್ನು ಚಾಚಿದೆ.

           ಈ ನಿಟ್ಟಿನಲ್ಲಿ ತನ್ನ ಸದಸ್ಯರಾದ ಬೆದ್ರಂಪಳ್ಳದ ಕುಮುದಾಕ್ಷಿ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಪಘಾತದಲ್ಲಿ ನಿಧನರಾದ ಕುಕ್ಕಿಲ ಚನಿಯಪ್ಪ ಪೂಜಾರಿಯವರ ಕುಟುಂಬಕ್ಕೆ ಕ್ಯಾಂಪ್ಕೋ ವತಿಯಿಂದ 50,000 ರೂ.ವನ್ನು ನೀಡಲಾಯಿತು. ಅವರ ಪತ್ನಿ ರೂಪಲತಾ ಚೆಕ್ ಅನ್ನು ಪಡೆದುಕೊಂಡರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಚೆಕ್ ಹಸ್ತಾಂತರಿಸಿದರು. 

         ನಿರ್ದೇಶಕರುಗಳಾದ ಬಾಲಕೃಷ್ಣ ರೈ, ಪದ್ಮರಾಜ ಪಟ್ಟಾಜೆ, ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ರಾಧಾಕೃಷ್ಣನ್ ಕೆ.,ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ., ಸ್ಥಾನೀಯ ಪ್ರಬಂಧಕ ಗಿರೀಶ್ ಕಾನತ್ತೂರು, ಬದಿಯಡ್ಕ ಶಾಖಾ ಪ್ರಬಂಧಕ ದಿನೇಶ್ ಕುಮಾರ್, ಸಿಬ್ಬಂದಿ ಸುರೇಶ್ ಶೆಟ್ಟಿ ಪರಂಕಿಲ ಜೊತೆಗಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries