HEALTH TIPS

ಕಪ್ಪು-ಬಿಳಿ-ಹಳದಿ ಆಯ್ತು, ಈಗ ಹಸಿರು ಫಂಗಸ್​ ಪತ್ತೆ! ಇದು ದೇಶದಲ್ಲೇ ಮೊದಲ ಪ್ರಕರಣ

            ಇಂಧೋರ್​​: ಬ್ಲ್ಯಾಕ್​ ಫಂಗಸ್​, ವೈಟ್​ ಫಂಗಸ್, ಯೆಲ್ಲೋ ಫಂಗಸ್​ ಆಯ್ತು… ಇದೀಗ ಗ್ರೀನ್​ ಫಂಗಸ್​ ಪತ್ತೆಯಾಗಿದೆ! ಕಪ್ಪು, ಬಿಳಿ, ಹಳದಿ ಫಂಗಸ್​ನ ಅಟ್ಟಹಾಸ ಹೆಚ್ಚುತ್ತಿರುವ ನಡುವೆಯೇ ಗ್ರೀನ್​ ಫಂಗಸ್​ ಕಾಣಿಸಿಕೊಂಡು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

           ಮಧ್ಯಪ್ರದೇಶದಲ್ಲಿ ಕರೊನಾ ಸೋಂಕಿನಿಂದ ಗುಣಮುಖವಾದ 34 ವರ್ಷದ ವ್ಯಕ್ತಿಯೊಬ್ಬರಲ್ಲಿ ಗ್ರೀನ್​ ಫಂಗಸ್​ ಪತ್ತೆಯಾಗಿದ್ದು, ಇದು ದೇಶದಲ್ಲೇ ಮೊದಲ ಪ್ರಕರಣ. ಸೈನಸ್ ಮತ್ತು ಶ್ವಾಸಕೋಶದಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು, ಗ್ರೀನ್​ ಫಂಗಸ್​ ಪತ್ತೆಯಾದ ರೋಗಿಯು ಜ್ವರ ಮತ್ತು ರಕ್ತಸ್ರಾವದಿಂದ ಬಳಲುತ್ತಿದ್ದಾರೆ. ಗ್ರೀನ್​ ಫಂಗಸ್​ ರೋಗಿಯನ್ನ ಏರ್​ ಲಿಫ್ಟ್​ ಮೂಲಕ ಮುಂಬೈನ ಆಸ್ಪತ್ರೆಗೆ ರವಾನಿಸಲಾಗಿದೆ.

         ಕರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿ ಸುಮಾರು ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲೇ ಇದ್ದರು. ಗುಣಮುಖರಾದ ಬಳಿಕ ಮನೆಗೆ ಕಳಿಸಲಾಗಿತ್ತು. ಇದಾದ 10 ದಿನಕ್ಕೆ ಮೂಗು ತುರಿಕೆ, ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಹಸಿರಿ ಫಂಗಸ್​ ಪತ್ತೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries