ಬದಿಯಡ್ಕ: ರೆಡ್ ಫೆÇೀರ್ಸ್ ಕುಂಬಡಾಜೆ ತಂಡದ ನೇತೃತ್ವದಲ್ಲಿ ಎ.ಪಿ. ಸರ್ಕಲ್ ಗೋಸಾಡಾ ರಸ್ತೆಯನ್ನು ಶುಚಿಗೊಳಿಸಲಾಯಿತು. ರಸ್ತೆಯ ಎರಡೂ ಬದಿ ಕಾಡು ಮಿತಿಮೀರಿ ಬೆಳೆದಿದ್ದು, ಭಾರೀ ಮಳೆಯಿಂದಾಗಿ ನೀರು ತುಂಬಿ ರಸ್ತೆಯು ಸಂಚಾರಕ್ಕೆ ಕಷ್ಟಪಡಬೇಕಾಗಿತ್ತು. ಗ್ರಾಮಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಟಿ ಎಂ ಚಾಲನೆ ನೀಡಿದರು. ಸಿಪಿಐ ಸ್ಥಳೀಯ ಸಮಿತಿ ಸದಸ್ಯರಾದ ಮ್ಯಾಥ್ಯೂ ಗಾಡಿಗುಡ್ಡೆ ಮತ್ತು ವಿಜು ಕುಂಬಡಾಜೆ ನೇತೃತ್ವ ವಹಿಸಿದ್ದರು. ಅನಿಲ್, ರಫೀಕ್, ಅಚ್ಚುತಾ, ಸಂಜೀವ ಗೋಸಡ, ಅಖಿಲ್, ಚಂದ್ರ, ಐತ್ತಪ್ಪ, ರಾಬಿನ್, ರಮೇಶ್, ರೋಶನ್, ಅಜೀಜ್, ಗಣೇಶ್, ಉದಯ, ಜಮಾಲ್, ಹರಿಷಾ, ಜಾನ್, ಮಿಲ್ಟನ್, ಕೆನ್ನೆಟ್, ಕೃಷ್ಣ, ಸಿಯಾಬ್, ಮುಹಮ್ಮದ್, ಸಂತೋಷ್, ನವೀನ ಪಾಲ್ಗೊಂಡಿದ್ದರು.





