ತಿರುವನಂತಪುರ: ಕೇಂದ್ರವು ಬಡವರಿಗೆ ಹಂಚಿಕೆ ಮಾಡಿರುವ 596.65 ಟನ್ ನೆಲಗಡಲೆಯನ್ನು ರಾಜ್ಯ ಸರ್ಕಾರವು ವಿತರಣೆ ಮಾಡದೆ ಹುಳು ಹಿಡಿಯುವಂತೆ ಮಾಡಿದೆ ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ಹೇಳಿದ್ದಾರೆ. ರಾಜ್ಯವು ಕೇಂದ್ರ ಯೋಜನೆಗಳನ್ನು ಬುಡಮೇಲುಗೊಳಿಸುತ್ತಿದೆ. ಅಭಿವೃದ್ಧಿ ಚಟುವಟಿಕೆಗಳನ್ನು ರಾಜ್ಯ ಸರ್ಕಾರವು ರಾಜಕೀಯದ ಆಧಾರದ ಮೇಲೆ ನಿರ್ವಹಿಸುವುದನ್ನು ಕೊನೆಗೊಳಿಸಬೇಕು ಎಂದರು.
ಕೊರೋನಾದಿಂದ ಬಳಲುತ್ತಿರುವ ಬಡ ಜನರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವ ಉದ್ದೇಶದಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಆಹಾರ ಧಾನ್ಯಗಳನ್ನು ನೀಡಿತ್ತು. ಕೊನೆಯ ಲಾಕ್‍ಡೌನ್‍ನಲ್ಲಿ ನಿಗದಿಪಡಿಸಿದ ಆಹಾರ ಧಾನ್ಯಗಳು ಕೇರಳದಲ್ಲಿ ಗ್ರಾಹಕರಿಗೆ ತಲುಪದಿರುವುದು ದುರದೃಷ್ಟಕರ. ರಾಜ್ಯ ಸರ್ಕಾರದ ಉದಾಸೀನತೆಯು ನೀಡಲಾದ ಕಡಲೆಕಾಯಿ ಹುಳುಗಳಿಗೆ ಎರೆಯಾದುದು ದುರದೃಷ್ಟಕರ. ಇದನ್ನು ಆದ್ಯತೆಯ ಪಡಿತರ ಚೀಟಿ ಹೊಂದಿರುವವರಿಗೆ ನೀಡಬೇಕಾಗಿತ್ತು. ಕೇಂದ್ರ ಯೋಜನೆಗಳನ್ನು ಜನರಿಗೆ ತಲುಪದಂತೆ ಮಾಡಲು ಇದು ಯೋಜಿತ ಕ್ರಮವೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ. ಕೇಂದ್ರ ಯೋಜನೆಗಳ ಬಗ್ಗೆ ಆಡಳಿತಾರೂ ಎಲ್.ಡಿ.ಎಫ್. ಕಮ್ಯುನಿಸ್ಟ್ ಸರಕಾರದ ನಕಾರಾತ್ಮಕ ಮನೋಭಾವಕ್ಕೆ ಇದು ಇತ್ತೀಚಿನ ಉದಾಹರಣೆಯಾಗಿದೆ ಎಂದು ಮರಲೀಧರನ್ ಗಮನಸೆಳೆದರು.
ಪ್ರಧಾನಮಂತ್ರಿಗಳ ವಸತಿ ಯೋಜನೆಯಡಿ ಬಡವರಿಗೆ ಮನೆಗಳ ನಿರ್ಮಾಣಕ್ಕಾಗಿ ಕೇಂದ್ರವು ನಿಗದಿಪಡಿಸಿದ 195.82 ಕೋಟಿ ರೂ.ಗಳನ್ನು ರಾಜ್ಯ ವ್ಯರ್ಥ ಮಾಡಿದೆ ಎಂದು ಇತ್ತೀಚೆಗೆ ಸಿಎಜಿ ವರದಿಯಿಂದ ಹೊರಬಿದ್ದಿದೆ. 2016-2017 ಮತ್ತು 2017-18ರ ಅವಧಿಯಲ್ಲಿ 42431 ಮನೆಗಳನ್ನು ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕೇವಲ 16101 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಎಲ್ಲಾ ಮನೆಗಳಿಗೆ ಕೊಳವೆಗಳ ಮೂಲಕ ಶುದ್ಧ ಕುಡಿನೀರನ್ನು ಒದಗಿಸುವ ಗುರಿ ಹೊಂದಿರುವ ಜಲ ಜೀವನ್ ಮಿಷನ್ ಕೇರಳದ ಅರ್ಹ ಕುಟುಂಬಗಳಿಗೆ ತಲುಪುತ್ತಿಲ್ಲ ಎಂದು ಕೇಂದ್ರ ಜಲ ಮತ್ತು ಇಂಧನ ಸಚಿವಾಲಯ ಈ ಹಿಂದೆ ತಿಳಿಸಿತ್ತು. ಈ ವರ್ಷ ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಕೇಂದ್ರವು 1804.59 ಕೋಟಿ ರೂ.ಗಳನ್ನು ಮಂಜೂರು ಮಾಡಿದಾಗ, ಹಿಂದಿನ ವರ್ಷದಂತೆಯೇ ಪರಿಸ್ಥಿತಿ ಇರಬಾರದು ಎಂದು ಸೂಚಿಸಲಾಗಿದೆ ಎಂಬುದನ್ನು ಸಹ ನೆನಪಿನಲ್ಲಿಡಬೇಕು. ರಾಜ್ಯದ ಪ್ರಮುಖ ಕೇಂದ್ರ ಯೋಜನೆಗಳನ್ನು ಮಟ್ಟಹಾಕುವ ಪರಿಸ್ಥಿತಿಯನ್ನು ಪರಿಶೀಲಿಸಬೇಕಾಗಿದೆ. ಅಭಿವೃದ್ಧಿಯಲ್ಲಿ ರಾಜಕೀಯವನ್ನು ನೋಡದೆ ಮುಂದೆ ಸಾಗುತ್ತಿರುವ ಕೇಂದ್ರ ಸರ್ಕಾರವನ್ನು ಅನುಕರಿಸಲು ರಾಜ್ಯವು ಸಿದ್ಧವಾಗಬೇಕು ಎಂದರು.





