HEALTH TIPS

ವಿದ್ಯುತ್‌ ತಿದ್ದುಪಡಿ ಮಸೂದೆ ಶೀಘ್ರ ಸಂಪುಟದಲ್ಲಿ ಮಂಡನೆ

           ನವದೆಹಲಿ: ವಿದ್ಯುತ್‌ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಉದ್ದೇಶದಿಂದ ರೂಪಿಸಲಾಗಿರುವ 'ವಿದ್ಯುತ್‌ (ತಿದ್ದುಪಡಿ) ಮಸೂದೆ-2021' ಅನ್ನು ಕೇಂದ್ರ ಸಚಿವ ಸಂಪುಟದ ಮಂದೆ ಶೀಘ್ರ ಮಂಡಿಸುವ ಸಾಧ್ಯತೆ ಇದೆ.

        ದೂರ ಸಂಪರ್ಕ ಸೇವೆಗಳ ರೀತಿಯಲ್ಲೇ ವಿದ್ಯುತ್‌ ಒದಗಿಸುವ ಕಂಪನಿಗಳನ್ನು ಬಳಕೆದಾರರು ಆಯ್ಕೆ ಮಾಡಿಕೊಳ್ಳಲು ಈ ಮಸೂದೆಯಲ್ಲಿ ಅವಕಾಶ ಒದಗಿಸಲಾಗಿದೆ.

         ಜತೆಗೆ, ವಿದ್ಯುತ್‌ ಕ್ಷೇತ್ರದಲ್ಲಿ ಸ್ಪರ್ಧೆ, ಮೇಲ್ಮನವಿ ನ್ಯಾಯಮಂಡಳಿಯನ್ನು ಬಲಪಡಿಸುವುದು (ಎಪಿಟಿಇಎಲ್‌) ಹಾಗೂ ನವೀಕರಿಸಬಹುದಾದ ವಿದ್ಯುತ್‌ ಖರೀದಿ ಒಪ‍್ಪಂದ ಪಾಲಿಸುವುದು (ಆರ್‌ಪಿಒ) ಮುಂತಾದ ಅಂಶಗಳನ್ನು ಈ ಮಸೂದೆಯು ಒಳಗೊಂಡಿದೆ. ಆರ್‌ಪಿಒ ಅನ್ವಯ ನವೀಕರಿಸಬಹುದಾದ ಇಂಧನದ ಮೂಲಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ವಿದ್ಯುತ್‌ ವಿತರಣಾ ಕಂಪನಿಗಳು ಖರೀದಿಸಬೇಕಾಗುತ್ತದೆ.

          ವಿದ್ಯುತ್‌ ಬಳಕೆದಾರರ ಕರ್ತವ್ಯಗಳು ಮತ್ತು ಹಕ್ಕುಗಳನ್ನು ಸಹ ಮಸೂದೆಯು ಒಳಗೊಂಡಿದೆ.

'ವಿದ್ಯುತ್‌ ವಿತರಣೆಯ ಲೈಸನ್ಸ್‌ ಅನ್ನು ವಿಕೇಂದ್ರೀಕರಣಗೊಳಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಈ ಮಸೂದೆಯ ಟಿಪ್ಪಣಿಯನ್ನು ಸಂಬಂಧಿಸಿದ ಎಲ್ಲ ಸಚಿವಾಲಯಗಳಿಗೆ ಅನುಮೋದನೆಗೆ ಕಳುಹಿಸಲಾಗಿದೆ. ಕಾನೂನು ಸಚಿವಾಲಯ ಒಂದೆರಡು ಪ್ರಶ್ನೆಗಳನ್ನು ಕೇಳಿದೆ. ಈ ಬಗ್ಗೆ ವಿವರಣೆ ನೀಡಲಾಗಿದೆ' ಎಂದು ವಿದ್ಯುತ್‌ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್‌.ಕೆ. ಸಿಂಗ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು.

        ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಸರ್ಕಾರ ಉದ್ದೇಶಿಸಿದೆ. ಹೀಗಾಗಿ, ಕೆಲವೇ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries