HEALTH TIPS

BREAKING ಮಂಜೇಶ್ವರ ಹೊಸಂಗಡಿಯಲ್ಲಿ ಜುವೆಲ್ಲರಿ ದರೋಡೆ: ಕಾವಲುಗಾರನನನ್ನು ಕಟ್ಟಿಹಾಕಿ ಥಳಿಸಿ ಕುಕೃತ್ಯ

        ಮಂಜೇಶ್ವರ: ಮಂಜೇಶ್ವರ ಹೊಸಂಗಡಿಯಲ್ಲಿ ಆಭರಣ ಮಳಿಗೆಯೊಂದರಲ್ಲಿ ಬೃಹತ್ ಪ್ರಮಾಣದ ಆತಂಕಕಾರಿ ದರೋಡೆ ಪ್ರಕರಣ ನಡೆದಿದೆ.  ಸೆಕ್ಯುರಿಟಿ ಗಾರ್ಡ್ ನ  ತಲೆಗೆ ಘಾಸಿಗೊಳಿಸಿ  ದರೋಡೆ ನಡೆಸಲಾಗಿದೆ.  ದರೋಡೆಕೋರರು 15 ಕೆಜಿ ಬೆಳ್ಳಿ ಮತ್ತು 4.5 ಲಕ್ಷ ರೂ. ದೋಚಿರುವುದಾಗಿ ತಿಳಿದುಬಂದಿದೆ.
      ಹೊಸಂಗಡಿಯ  ರಾಜಧಾನಿ ಜ್ಯುವೆಲ್ಲರಿಯಲ್ಲಿ ಈ ದರೋಡೆ ಘಟನೆ ನಡೆದಿದೆ. ಇಂದು  ಮುಂಜಾನೆ 2.30 ರ ಸುಮಾರಿಗೆ ಈ ಘಟನೆ ನಡೆದಿದೆ.
      ದರೋಡೆಕೋರರು ಕಾವಲುಗಾರನನ್ನು ಕಟ್ಟಿಹಾಕಿ ತಲೆಗೆ ಹೊಡಿದಿದ್ದು, ಬಳಿಕ ತಂಡ  ಆಭರಣ ಮಳಿಗೆ ಬೀಗ ಮುರಿದು ಒಳ ಪ್ರವೇಶಿಸಿತು.  ಎರಡು ವಾಹನಗಳಲ್ಲಿ ಬಂದ ತಂಡ ದರೋಡೆ ನಡೆಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿಯಲಾಗಿದೆ.  ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ಕಾವಲುಗಾರ  ಹೇಳಿಕೆ ನೀಡಿದ್ದಾರೆ.
      ಡಿವೈಎಸ್ಪಿ ಸೇರಿದಂತೆ ಸ್ಥಳೀಯರು ಸ್ಥಳಕ್ಕೆ ತಲುಪಿದ್ದಾರೆ.  ಶ್ವಾನ ದಳ  ಮತ್ತು ಬೆರಳಚ್ಚು ತಂಡ  ಪರಿಶೀಲನೆ ನಡೆಸುತ್ತಿದ್ದಾರೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries