HEALTH TIPS

ಇಂಡಿಯನ್ ನ್ಯಾಷನಲ್ ಲೀಗ್ ಇಬ್ಬಾಗ: ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರು ಹೊರಕ್ಕೆ: ಸಚಿವರಿಗೂ ಗೇಟ್ ಪಾಸ್ !

                                 

           ಕೊಚ್ಚಿ: ಎಲ್.ಡಿ.ಎಫ್.ನ ಘಟಕ ಪಕ್ಷವಾದ ಇಂಡಿಯನ್ ನ್ಯಾಷನಲ್ ಲೀಗ್ (ಐಎನ್‍ಎಲ್) ವಿಭಜನೆಯಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರು ಪರಸ್ಪರ ಆರೋಪ ಪ್ರತ್ಯಾರೋಪಗಳೊಂದಿಗೆ ವಿಭಜನೆ ನಡೆಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಸಿಮ್ ಎರಿಕೂರ್ ಅವರನ್ನು ಉಚ್ಚಾಟಿಸಿರುವ ಬಗ್ಗೆ ಅಧ್ಯಕ್ಷ ಎಪಿ ಅಬ್ದುಲ್ ವಹಾಬ್ ಘೋಷಿಸಿದ್ದಾರೆ. ಏತನ್ಮಧ್ಯೆ, ಅಬ್ದುಲ್ ವಹಾಬ್ ಅವರನ್ನು ವಜಾ ಮಾಡಲಾಗಿದೆ ಎಂದು ಖಾಸಿಮ್ ಸ್ಪಷ್ಟಪಡಿಸಿದ್ದಾರೆ. ಈಗ ಈ ಬಗೆಗಿನ ಗೊಂದಲಮಯ ಘಟನೆ ಪಕ್ಷದ ರಾಷ್ಟ್ರೀಯ ನಾಯಕತ್ವದ ಅಂಗಳದಲ್ಲಿದೆ. ಐಎನ್‍ಎಲ್‍ನ ಎರಡು ಬಣಗಳ ನಡುವಿನ ವಿಶೇಷ ಸಭೆಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ನಾಯಕರು ಈ ಹೇಳಿಕೆ ನೀಡಿದ್ದಾರೆ.

               ತನ್ನನ್ನು ಪಕ್ಷದಿಂದ ಉಚ್ಚಾಟಿಸಿರುವ ಬಗ್ಗೆ ರಾಷ್ಟ್ರೀಯ ನಾಯಕತ್ವದ ನಿರ್ಧಾರವನ್ನು ತಿರಸ್ಕರಿಸಿರುವುದಾಗಿ ಅಬ್ದುಲ್ ವಹಾಬ್ ಹೇಳಿದ್ದಾರೆ.  ಕಾಸಿಮ್ ಎರಿಕೂರ್ ಅವರ ಬದಲಿಗೆ ಅಬ್ದುಲ್ ವಹಾಬ್ ಬಣದ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ನಾಸರ್ ಕೋಯ ತಂಙಳ್ ಅವರನ್ನು ನೇಮಕಗೊಳ|ಇಸಲಾಗಿದೆ. ಸಚಿವ ಅಹ್ಮದ್ ದೇವರ್ಕೋವಿಲ್ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ವಹಾಬ್ ಹೇಳಿದ್ದಾರೆ.

                ಆದರೆ ರಾಷ್ಟ್ರೀಯ ನೇತಾರರ ಬೆಂಬಲ ತಮಗಿದೆ ಎಂದು ಕಾಸಿಮ್ ಇರಿಕೂರ್ ಹೇಳಿದ್ದಾರೆ. ಪ್ರಸ್ತುತ ಕಾರ್ಯಕಾರಿ ಅಧ್ಯಕ್ಷರಾದ ಹಮ್ಜಾ ಹಾಜಿಯನ್ನು ಕಾಸಿಮ್ ಬಣವು ತನ್ನ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ವಹಾಬ್ ಜೊತೆಗೆ ಏಳು ಕಾರ್ಯದರ್ಶಿ ಸದಸ್ಯರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಖಾಸಿಮ್ ಇರಿಕೂರ್ ಹೇಳಿದರು.

                 ಅಬ್ದುಲ್ ವಹಾಬ್ ಅವರು ಕರೆದ ಸಭೆ ಕೊಚ್ಚಿ ತೋಪುಂಪಡಿಯಲ್ಲಿ ಮತ್ತು ಕಾಸಿಮ್ ಇರಿಕೂರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಅಲುವಾದಲ್ಲಿ ನಡೆಯಿತು. ನಿನ್ನೆ ಬೆಳಿಗ್ಗೆ ಕೊಚ್ಚಿಯಲ್ಲಿ ನಡೆದ ರಾಜ್ಯ ನೇತಾರರ ಸಭೆಯಲ್ಲಿ ಉಭಯ ಬಣಗಳ ನಡುವೆ ಘರ್ಷಣೆ ನಡೆದಿತ್ತು. ಆ ಬಳಿಕ ಉಭಯ ಗುಂಪುಗಳ ನಡುವೆ ಪ್ರತ್ಯೇಕ ಸಭೆ ನಡೆಯಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries