HEALTH TIPS

ಕೋವಿಡ್ ಪ್ರತಿರೋಧ: ಜನಸಂಖ್ಯೆಗನುಸಾರ ತಪಾಸಣೆ ನಡೆಸುವ ಸಂಬಂಧ ರೂಪುರೇಷೆ ಸಿದ್ಧ

                           

              ಕಾಸರಗೋಡು: ಕೋವಿಡ್ ಪ್ರತಿರೋಧ ಅಂಗವಾಗಿ ಜನಸಂಖ್ಯೆಗನುಸಾರ ತಪಾಸಣೆ ನಡೆಸುವ ಸಂಬಂಧ ರೂಪುರೇಷೆ ಸಿದ್ಧಗೊಂಡಿದೆ.  

              ಕೋವಿಡ್ ತಪಾಸಣೆ ಹೆಚ್ಚಳಗೊಳಿಸಿ ರೋಗ ಖಚಿತತೆ ಗಣನೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು. 

         ಪ್ರತಿದಿನ 7709 ತಪಾಸಣೆ, ವಾರದಲ್ಲಿ ಒಟ್ಟು 53962 ತಪಾಸಣೆ ನಡೆಸುವುದು ಇಲ್ಲಿನ ಗುರಿಯಾಗಿದೆ. 2011 ರ ಜನಗಣಣತಿ ಪ್ರಕಾರ 13,07,375 ಜನಸಂಖ್ಯೆ ಶೇ 4 ತಪಾಸಣೆಯನ್ನು ವಾರದಲ್ಲಿ ನಡೆಸಲಾಗುವುದು. ಜುಲೈ 14ರಿಂದ 20 ವರೆಗಿನ ವಾರದಲ್ಲಿ ನಡೆಸುವ ತಪಾಸನೆಗಳ ರೂಪುರೇಷೆಗಳನ್ನು ಸಿದ್ಧಗೊಳಿಸಲಾಗಿದೆ. ಡಿ ಕ್ಯಾಟಗರಿಯಲ್ಲಿರುವ ಸ್ಥಳೀಯಾಡಳಿತ ಸಂಸ್ಥೆಗಳನ್ನು ಮುಂದಿನ ವಾರದ ವೇಳೆಗೆ ಬಿ,ಸಿ, ಕ್ಯಾಟಗರಿಗೆ ತಲಪಿಸುವ ನಿಟ್ಟಿನಲ್ಲಿ ತಪಾಸಣೆ ಹೆಚ್ಚಳಗೊಳಿಸಲಾಗುತ್ತಿದೆ ಎಂದವರು ಹೇಳಿದರು. 

           ಕಾಸರಗೋಡು ಜಿಲ್ಲೆಯಲ್ಲೀಗ 17 ಸ್ಥಳೀಯಾಡಳಿತ ಸಂಸ್ಥೆಗಳು ಡಿ ಕ್ಯಾಟಗರಿಯಲ್ಲಿವೆ. ಅತ್ಯಧಿಕ ಪ್ರಮಾಣದಲ್ಲಿ ಟಿ.ಪಿ.ಆರ್. ವರದಿಯಾಗಿರುವ ಪಿಲಿಕೋಡ್ ಗ್ರಾಮ ಪಂಚಾಯತ್ ನಲ್ಲಿ ಪ್ರತಿದಿನ 179 ಮಂದಿಯನ್ನು ತಪಾಸಣೆಗೆ ಒಳಗುಮಾಡಲಾಗುತ್ತಿದೆ. ವಾರದಲ್ಲಿ 1256 ಮಂದಿಯ ತಪಾಸಣೆ ನಡೆಸಲಾಗುವುದು. 2011ರ ಜನಗಣಣತಿ ಪ್ರಕಾರ ಜನಸಂಖ್ಯೆ ಶೇ 5 ಇದಾಗಿದೆ. 

            ದೇಲಂಪಾಡಿ ಗ್ರಾಮ ಪಂಚಾಯತ್ ನಲ್ಲಿ 1139 ಮಂದಿಯನ್ನು, ಚೆಮ್ನಾಡು ಗ್ರಾಮ ಪಂಚಾಯತ್ ನಲ್ಲಿ 2737 ಮಂದಿಯನ್ನು, ಉದುಮಾ ಗ್ರಾಮ ಪಂಚಾಯತ್ ನಲ್ಲಿ 1877 ಮಂದಿಯನ್ನು, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ನಲ್ಲಿ 1175 ಮಂದಿಯನ್ನೂ, ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ನಲ್ಲಿ 1379 ಮಂದಿಯನ್ನೂ, ಮಡಿಕೈ ಗ್ರಾಮ ಪಂಚಾಯತ್ ನಲ್ಲಿ, ಚೆಂಗಳ ಗ್ರಾಮ ಪಂಚಾಯತ್ ನಲ್ಲಿ 2839 ಮಂದಿಯನ್ನೂ, ಕಳ್ಳಾರ್ ಗ್ರಾಮ ಪಂಚಾಯತ್ ನಲ್ಲಿ 971 ಮಂದಿಯನ್ನೂ ತಪಾಸಣೆಗೊಳಪಡಿಸಲಾಗುವುದು. ಪಳ್ಳಿಕ್ಕರೆ ಗ್ರಾಮಪಂಚಾಯತ್ ನಲ್ಲಿ 2163 ಮಂದಿಯನ್ನೂ, ನೀಲೇಶ್ವರ ನಗರಸಭೆಯಲ್ಲಿ 1988 ಮಂದಿಯನ್ನೂ, ಪನತ್ತಡಿ ಗ್ರಾಮ ಪಂಚಾಯತ್ ನಲ್ಲಿ 1149 ಮಂದಿಯನ್ನೂ, ಬೇಡಡ್ಕ ಗ್ರಾಮ ಪಂಚಾಯತ್ ನಲ್ಲಿ 1393 ಮಂದಿಯನ್ನೂ, ಕುತ್ತಿಕೋಲು ಗ್ರಾಮ ಪಂಚಾಯತ್ ನಲ್ಲಿ 1246 ಮಂದಿಯನ್ನೂ, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ನಲ್ಲಿ 1482 ಮಂದಿಯನ್ನೂ ತಪಾಸಣೆಗೆ ಒಳಪಡಿಸಲಾಗುವುದು. ಸದ್ರಿ ಡಿ ಕ್ಯಾಟಗರಿಯಲ್ಲಿ ಸೇರಿರುವ ಸ್ಥಳೀಯಾಡಳಿತ ಸಂಸ್ಥೆಗಳ ಜನಸಂಖ್ಯೆಯ ಶೇ 5 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುವುದು.        

                  ಸಿ ವಿಭಾಗದಲ್ಲಿ ಸೇರಿರುವ 12 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಜನಸಂಖ್ಯೆ ಶೇ 5 ಮಂದಿಯ ತಪಾಸಣೆ ನಡೆಸಲಾಗುವುದು. ಮಧೂರು ಗ್ರಾಮ ಪಂಚಾಯತ್ ನಲ್ಲಿ 2073 ಮಂದಿಯನ್ನು, ಚೆರುವತ್ತೂರು ಗ್ರಾಮ ಪಂಚಾಯತ್ ನಲ್ಲಿ 1372 ಮಂದಿಯನ್ನು, ಕಾಞಂಗಾಡು ನಗರಸಭೆಯಲ್ಲಿ 3667 ಮಂದಿಯನ್ನು, ವಲಿಯಪರಂಬ ಗ್ರಾಮಪಂಚಾಯತ್ ನಲ್ಲಿ 640 ಮಂದಿಯನ್ನು,

ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ನಲ್ಲಿ 1242 ಮಂದಿಯನ್ನೂ, ವೆಸ್ಟ್ ಏಳೇರಿ ಗ್ರಾಮ ಪಂಚಾಯತ್ ನಲ್ಲಿ 1466 ಮಂದಿಯನ್ನೂ, ತ್ರಿಕರಿಪುರ ಗ್ರಾಮಪಂಚಾಯತ್ ನಲ್ಲಿ 1934 ಮಂದಿಯನ್ನೂ, ಬಳಾಲ್ 1164 ಮಂದಿಯನ್ನೂ, ಈಸ್ಟ್ ಏಳೇರಿ ಗ್ರಾಮ ಪಂಚಾಯತ್ ನಲ್ಲಿ 1254 ಮಂದಿಯನ್ನೂ, ಮುಳಿಯಾರು ಗ್ರಾಮ ಪಂಚಾಯತ್ ನಲ್ಲಿ 1255 ಮಂದಿಯನ್ನೂ, ಪುತ್ತಿಗೆ ಗ್ರಾಮ ಪಂಚಾಯತ್ ನಲ್ಲಿ 1091 ಮಂದಿಯನ್ನೂ, ಮೀಂಜ ಗ್ರಾಮ ಪಂಚಾಯತ್ ನಲ್ಲಿ 1166 ಮಂದಿಯನ್ನೂ ತಪಾಸಣೆಗೊಳಪಡಿಸಲಾಗುವುದು. 

          ಬಿ ವಿಭಾಗದಲ್ಲಿ ಸೇರಿರುವ ಸ್ಥಳೀಯಾಡಳಿತ ಸಂಸ್ಥೆಗಳ ಜನಸಂಖ್ಯೆಯ ಶೇ 2 ಮಂದಿಯ ತಪಾಸಣೆ ನಡೆಸಲಾಗುವುದು. ಬದಿಯಡ್ಕ ಗ್ರಾಮ ಪಂಚಾಯತ್ ನಲ್ಲಿ 684 ಮಂದಿಯನ್ನೂ, ಕುಂಬಡಾಜೆ ಗ್ರಾಮಪಂಚಾಯತ್ ನಲ್ಲಿ 295 ಮಂದಿಯನ್ನೂ, ಎಣ್ಮಕಜೆ ಗ್ರಾಮ ಪಂಚಾಯತ್ ನಲ್ಲಿ 536 ಮಂದಿಯನ್ನೂ, ಮಂಜೇಶ್ವರ ಗ್ರಾಮ ಪಂಚಾಯತ್ ನಲ್ಲಿ 830 ಮಂದಿಯನ್ನೂ, ಮಂಗಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ 969 ಮಂದಿಯನ್ನೂ, ಬೆಳ್ಳೂರು ಗ್ರಾಮ ಪಂಚಾಯತ್ ನಲ್ಲಿ 205 ಮಂದಿಯನ್ನೂ, ಕುಂಬಳೆ ಗ್ರಾಮ ಪಂಚಾಯತ್ ನಲ್ಲಿ 934 ಮಂದಿಯನ್ನೂ, ಪೈವಳಿಕೆ ಗ್ರಾಮ ಪಂಚಾಯತ್ ನಲ್ಲಿ 685 ಮಂದಿಯನ್ನೂ, ಪಡನ್ನ ಗ್ರಾಮ ಪಂಚಾಯತ್ ನಲ್ಲಿ 443 ಮಂದಿಯನ್ನೂ, ಕಾರಡ್ಕ ಗ್ರಾಮಪಂಚಾಯತ್ ನಲ್ಲಿ 424 ಮಂದಿಯನ್ನೂ ತಪಾಸಣೆಗೆ ಒಳಪಡಿಸಲಾಗುವುದು. 

          ಎ ವಿಭಾಗದಲ್ಲಿ ಸೇರಿರುವ ಸ್ಥಳೀಯಾಡಳಿತ ಸಂಸ್ಥೆಗಳ ಶೇ2 ಮಂದಿಯನ್ನು ವಾರದ ತಪಾಸಣೆಗೆ ಒಳಪಡಿಸಲಾಗುವುದು. ಕಾಸರಗೋಡು ನಗರಸಭೆಯ 1083 ಮಂದಿಯನ್ನೂ, ವರ್ಕಾಡಿ ಗ್ರಾಮ ಪಂಚಾಯತ್ ನ 515 ಮಂದಿಯ ತಪಾಸಣೆ ಈ ನಿಟ್ಟಿನಲ್ಲಿ ನಡೆಸಲಾಗುವುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries