ತಿರುವನಂತಪುರಂ: ವಿಶಿಷ್ಟ ಸೇವೆಗಾಗಿ ಪೋಲೀಸರಿಗೆ ನೀಡಲಾಗುವ ರಾಷ್ಟ್ರಪತಿ ಪದಕಗಳನ್ನು ಘೋಷಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ಬಾರಿ 1390 ಅಧಿಕಾರಿಗಳಿಗೆ ಪದಕಗಳನ್ನು ನೀಡಿದೆ. ಕೇರಳದ ಅಧಿಕಾರಿಗಳು 11 ಪದಕಗಳನ್ನು ಗೆದ್ದಿದ್ದಾರೆ. ಅತಿ ವಿಶಿಷ್ಟ ಸೇವೆಗಾಗಿ ಒಂದು ಪದಕ ಮತ್ತು ವಿಶಿಷ್ಟ ಸೇವೆಗಾಗಿ 10 ಪದಕಗಳನ್ನು ಪಡೆಯಲಾಗಿದೆ. ಎಡಿಜಿಪಿ ಯೋಗೀಶ್ ಗುಪ್ತಾ ಅವರಿಗೆ ವಿಶಿಷ್ಟ ಸೇವೆಗಾಗಿ ಪದಕ ನೀಡಲಾಗುವುದು.
ಕೇರಳದ ಐದು ಅಗ್ನಿಶಾಮಕ ಸಿಬ್ಬಂದಿಗೆ ಪದಕ ಒದಗಿಬಂದಿದೆ. ಸಿಬಿಐ ಯ ಅಧಿಕಾರಿಯಾಗಿರುವ ಮನೋಜ್ ಶಶಿಧರನ್ ಅವರಿಗೆ ವಿಶಿಷ್ಟ ಸೇವೆಗಾಗಿ ಪದಕ ಬಂದಿದೆ. ರಾಜಸ್ಥಾನ ಜೋಧಪುರ ಐಜಿ ಮತ್ತು ಕೇರಳೀಯ ಜೋಸ್ ಮೋಹನ್ ಕೂಡ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪದಕವನ್ನು ಪಡೆದಿರುವರು. ಅವರು ಸಿಬಿಐ ತಿರುವನಂತಪುರಂ ಘಟಕದ ಎಸ್ಪಿಯಾಗಿದ್ದರು.
ಜಿ ಸ್ಪರ್ಜನ್ ಕುಮಾರ್, ಟಿ ಕೃಷ್ಣ ಕುಮಾರ್, ಟಾಮಿ ಸೆಬಾಸ್ಟಿಯನ್, ಅಶೋಕನ್ ಅಪ್ಪುಕುಟ್ಟನ್, ಅರುಣ್ ಕುಮಾರ್ ಸುಕುಮಾರನ್, ಡಿ ಸಜಿ ಕುಮಾರ್, ಗಣೇಶನ್ ವಿಕೆ, ಸಿಂಧು ವಿಪಿ, ಸಂತೋಷ್ ಕುಮಾರ್ ಎಸ್ ಮತ್ತು ಸಿ ಎಂ ಸತೀಶನ್ ಅವರಿಗೆ ಗೌರವಯುತ ಸೇವೆಗಾಗಿ ಪದಕ ಘೋಷಿಸಲಾಗಿದೆ.
ಪ್ರಶಸ್ತಿ ಪಡೆದವರಲ್ಲಿ 256 ಮಂದಿ ಜಮ್ಮು ಮತ್ತು ಕಾಶ್ಮೀರದವರುÀ, 151 ಸಿಆರ್‍ಪಿಎಫ್‍ನಿಂದ, 20 ಐಟಿಬಿಪಿಯಿಂದ ಮತ್ತು ಉಳಿದವರು ಕೇಂದ್ರ ಸಶಸ್ತ್ರ ಪೆÇಲೀಸ್ ಪಡೆ ಮತ್ತು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದವರು.





