ಚಂಡೀಗಢ: ಸೋಮವಾರದಿಂದ ರಾಜ್ಯ ಪ್ರವೇಶಿಸುವ ಎಲ್ಲರಿಗೂ ಕಡ್ಡಾಯವಾಗಿ ಸಂಪೂರ್ಣ ಎರಡು ಡೋಸ್ ಕೋವಿಡ್ ಲಸಿಕೆ ಅಥವಾ ನೆಗಟಿವ್ ಆರ್‌ಟಿಪಿಸಿಆರ್ ವರದಿ ಕಡ್ಡಾಗೊಳಿಸಿ ಪಂಜಾಬ್ ಸರ್ಕಾರ ಶನಿವಾರ ಆದೇಶಿಸಿದೆ.
ವಿಶೇಷವಾಗಿ ಪಾಸಿಟಿವ್ ಪ್ರಮಾಣ ಹೆಚ್ಚುತ್ತಿರುವ ಹಿಮಾಚಲ ಪ್ರದೇಶ ಮತ್ತು ಜಮ್ಮುವಿನಿಂದ ಬರುವವರ ಮೇಲೆ ಕಟ್ಟುನಿಟ್ಟಾದ ನಿಗಾ ವಹಿಸುವಂತೆ ಪಂಜಾಬ್ ಸರ್ಕಾರ ಸೂಚಿಸಿದೆ.
ಪಂಜಾಬ್ ನಲ್ಲಿ ಕೋವಿಡ್ ದೈನಂದಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ರಾಜ್ಯ ಸರ್ಕಾರ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯನ್ನು ದಿನಕ್ಕೆ ಕನಿಷ್ಠ 60,000 ಪರೀಕ್ಷೆಗಳಿಗೆ ಹೆಚ್ಚಿಸಲು ಆದೇಶಿಸಿದೆ.
ಪೂರ್ಣ ವ್ಯಾಕ್ಸಿನೇಷನ್ ಅಥವಾ ನೆಗಟಿವ್ ಆರ್‌ಟಿಪಿಸಿಆರ್ ವರದಿಯ ನಿಯಮವು ಪಂಜಾಬ್‌ಗೆ ರಸ್ತೆ, ರೈಲು ಅಥವಾ ವಿಮಾನದ ಮೂಲಕ ಪ್ರವೇಶಿಸುವ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಹೇಳಿದ್ದಾರೆ.


