ತಿರುವನಂತಪುರಂ: ರಾಜ್ಯದಲ್ಲಿ ನಿನ್ನೆಯೊಂದೇ ದಿನ 5,08,849 ಮಂದಿ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ಘೋಷಿಸಿದ್ದಾರೆ. ಈ ಪೈಕಿ 4,39,860 ಮೊದಲ ಡೋಸ್ ಮತ್ತು 68,989 ಎರಡನೇ ಡೋಸ್ ಪಡೆದರು. ತಿರುವನಂತಪುರಂ, ಕೊಲ್ಲಂ, ತ್ರಿಶೂರ್, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಅರ್ಧ ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ದಿನದಲ್ಲಿ 5 ಲಕ್ಷ ದಾಟಿದ ಸತತ ಎರಡನೇ ದಿನ ನಿನ್ನೆಯಾಗಿ ದಾಖಲಾಯಿತು.
ಶುಕ್ರವಾರ 5.60 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆಯ ಮೊದಲ ಡೋಸ್ ಪ್ರಗತಿಯಲ್ಲಿದೆ. ಈ ವರ್ಗದಲ್ಲಿ ಯಾರಿಗಾದರೂ ಲಸಿಕೆ ಹಾಕಿಸಬೇಕಾದರೆ, ಅವರು ಆದಷ್ಟು ಬೇಗ ಹತ್ತಿರದ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು ಎಂದು ಸಚಿವರು ವಿನಂತಿಸಿದರು. ರಾಜ್ಯವು 2,91,080 ಡೋಸ್ ಕೋವಿಶೀಲ್ಡ್ಸ್ ನ್ನು ಸ್ವೀಕರಿಸಿದೆ; ತಿರುವನಂತಪುರಂ 98,560, ಎರ್ನಾಕುಲಂ 1,14,590 ಮತ್ತು ಕೋಳಿಕ್ಕೋಡ್ 77,930 ವಲಯಕ್ಕೆ ವಿತರಿಸಲಾಗಿದೆ.
1,478 ಸರ್ಕಾರಿ ಕೇಂದ್ರಗಳು ಮತ್ತು 359 ಖಾಸಗಿ ಕೇಂದ್ರಗಳು ಸೇರಿದಂತೆ 1837 ಲಸಿಕೆ ಕೇಂದ್ರಗಳು ಇದ್ದವು. ಇಲ್ಲಿಯವರೆಗೆ, ರಾಜ್ಯದಲ್ಲಿ ಒಟ್ಟು 2,39,22,426 ಮಂದಿ ಜನರಿಗೆ ಒಂದು ಮತ್ತು ಎರಡು ಡೋಸ್ ಲಸಿಕೆ ಹಾಕಲಾಗಿದೆ. ಈ ಪೈಕಿ 1,72,66,344 ಮಂದಿ ಮೊದಲ ಡೋಸ್ ಮತ್ತು 66,56,082 ಮಂದಿ ಎರಡನೇ ಡೋಸ್ ಪಡೆದರು.


