HEALTH TIPS

ಕೊರೊನಾ ಮುಂದಿನ ವರ್ಷಗಳಲ್ಲಿ ಮಕ್ಕಳ ರೋಗವಾಗಬಹುದು: ತಜ್ಞರು

                ವಾಷಿಂಗ್ಟನ್ : ಕೊರೊನಾ ಮುಂದೊಂದು ದಿನ ಮಕ್ಕಳ ರೋಗವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಕೆಲ ವರ್ಷಗಳಲ್ಲಿ ಕೋವಿಡ್ 19 ವೈರಸ್ ಇನ್ನಿತರೆ ಸಾಮಾನ್ಯ ನೆಗಡಿಕಾರಕ ವೈರಸ್‌ನಂತಾಗಬಹುದು.


         ಅದರಲ್ಲೂ ವಿಶೇಷವಾಗಿ ಇದು ಮಕ್ಕಳನ್ನು ಮಾತ್ರ ಬಾಧಿಸುವ ವೈರಸ್‌ ಆಗಬಹುದು ಎಂದು ಅಧ್ಯಯನವೊಂದು ಹೇಳಿದೆ. ಅಮೆರಿಕ ಮತ್ತು ನಾರ್ವೆ ವಿಜ್ಞಾನಿಗಳ ತಂಡವೊಂದು ಈ ಕುರಿತು ಅಧ್ಯಯನ ನಡೆಸಿದ್ದು, ಅದರಲ್ಲಿ ಕೋವಿಡ್ 19 ವೈರಸ್ ಇನ್ನು ಕೆಲ ವರ್ಷಗಳಲ್ಲಿ ಜಾಗತಿಕವಾಗಿ ಸ್ಥಳೀಯ ಸಾಂಕ್ರಾಮಿಕ ವೈರಸ್ ಆಗಲಿದೆ.

         ಅಂದರೆ ಸ್ಥಳೀಯವಾಗಿ ಮಾತ್ರ ಇದು ಹರಡಲಿದೆ. ಈಗ ಇದು ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡುತ್ತಿದ್ದರೂ ಮುಂದಿನ ವರ್ಷಗಳಲ್ಲಿ ಲಸಿಕೆಯಿಂದಾಗಿ ಅಥವಾ ನೈಸರ್ಗಿಕವಾಗಿ ಎಲ್ಲಾ ಹಿರಿಯರಿಗೂ ಈ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಲಭಿಸಲಿದೆ.

ಸಾಮಾನ್ಯವಾಗಿ ಶೀತವಾದಾಗ ನಮಗೆ ನೆಗಡಿ ಆಗುವುದು ಮಾಮೂಲಿ. ಕೋವಿಡ್ - 19 ರೋಗ - ಲಕ್ಷಣಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಕೂಡ ನೆಗಡಿಯ ಜೊತೆಗೆ ಗಂಟಲು ಕಟ್ಟುವುದು ಕೊರೊನಾಾ ವೈರಸ್ ಸೋಂಕಿನ ಪ್ರಾಥಮಿಕ ಚಿಹ್ನೆ ಎಂದು ಘೋಷಣೆ ಮಾಡಲಾಗಿದೆ.

           ನಿಮಗೆ ನೆಗಡಿ ಆಗಿದ್ದರೆ, ಅದು ಶೀತ ಮತ್ತು ಜ್ವರದ ಪ್ರಭಾವದಿಂದ ಎಂದು ವೈದ್ಯರು ಹೇಳುತ್ತಾರೆ. ಮಕ್ಕಳಲ್ಲಿ ನೆಗಡಿ ಕಂಡು ಬಂದ ತಕ್ಷಣ ಅದು ಕೊರೊನಾಾ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಈಗಾಗಲೇ ಪರೀಕ್ಷೆ ಮಾಡಿದ ಬಹುತೇಕ ಮಕ್ಕಳಲ್ಲಿ ಸಣ್ಣ ಪ್ರಮಾಣದ ನೆಗಡಿ ಮತ್ತು ಜ್ವರ ಇದ್ದವರು ಸಹ ಕೋವಿಡ್ - 19 ಪರೀಕ್ಷೆಯ ಫಲಿತಾಂಶದಲ್ಲಿ ನೆಗೆಟಿವ್ ಎಂದು ಪಡೆದುಕೊಂಡಿದ್ದಾರೆ.

ಆದರೆ ನೀವು ಇದರ ಜೊತೆಗೆ ಕೋವಿಡ್ - 19 ಕ್ಕೆ ಸಂಬಂಧ ಪಟ್ಟಂತೆ ಇನ್ನುಳಿದ ರೋಗ - ಲಕ್ಷಣಗಳ ಕಡೆಗೆ ಗಮನ ವಹಿಸಬೇಕಾಗುತ್ತದೆ.


              ಲಸಿಕೆ ಪಡೆಯದ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ

          ಇದು ಲಸಿಕೆ ಪಡೆಯದ ಮಕ್ಕಳಲ್ಲಿ ಮಾತ್ರ ಸಣ್ಣ ನೆಗಡಿ ಉಂಟು ಮಾಡುವ ಸಾಮಾನ್ಯ ವೈರಸ್ ಆಗಿ ಪರಿಣಮಿಸಲಿದೆ ಎಂದು ತಿಳಿದುಬಂದಿದೆ. ಉದಾಹರಣೆಗೆ 1889-1890ರ ಸಮಯದಲ್ಲಿ ಏಷಿಯಾಟಿಕ್ ಫ್ಲೂವೈರಸ್ ಜಗತ್ತಿನಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. 70 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿ ಸಾವನ್ನಪ್ಪಿದ್ದರು. ಆದರೆ, ಈಗ 7ರಿಂದ 12 ತಿಂಗಳ ನಡುವಿನ ಮಕ್ಕಳಿಗಷ್ಟೇ ಈ ವೈರಸ್‌ನಿಂದ ನೆಗಡಿಯಾಗುತ್ತದೆ. ಹೆಚ್ಚಿನ ಕೊರೊನಾ ವೈರಸ್‌ಗಳೆಲ್ಲಾ ಹೀಗೆ ವರ್ತಿಸುತ್ತವೆ ಎಂದು ಹೇಳಲಾಗಿದೆ.

              ಆಲೋಚನಾ ಶಕ್ತಿ ಕ್ಷೀಣ

             ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಬುದ್ಧಿ ಶಕ್ತಿ ಕ್ಷೀಣಿಸುವ ಸಾಧ್ಯತೆ ಇದೆ. ಸೋಂಕಿತರಿಗೆ ಆಲೋಚನೆ ಮತ್ತು ಗಮನ ಕೇಂದ್ರೀಕರಿಸುವುದರಲ್ಲಿ ಸಮಸ್ಯೆಗಳು ಎದುರಾಗಬಹುದು. ಎಕ್ಲಿನಿಕಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಕೊರೊನಾದ ಗಂಭೀರಸ್ವರೂಪದ ರೋಗ ಲಕ್ಷಣದಿಂದ ಚೇತರಿಸಿಕೊಂಡವರು, ಆನ್‌ಲೈನ್ ಸರಣಿ ಪರೀಕ್ಷೆಯ ಇತರರಿಗೆ ಹೋಲಿಸಿದರೆ ಕಡಿಮೆ ಅಂಕ ಗಳಿಸಿರುವುದು ಹಾಗೂ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವುದರಲ್ಲಿ ಹಿಂದೆ ಬಿದ್ದಿರುವುದು ಕಂಡುಬಂದಿದೆ. ಸುಮಾರು 80 ಸಾವಿರ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಿ ಈ ಅಂಶಗಳನ್ನು ಕಂಡುಕೊಳ್ಳಲಾಗಿದೆ.

               ಸಣ್ಣ ಪ್ರಮಾಣದ ಸೋಂಕು

            ದೊಡ್ಡವರಿಗೆ ಹೋಲಿಸಿದರೆ ಕೋವಿಡ್ - 19 ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಬೇರೆ ಬಗೆಯ ರೋಗ - ಲಕ್ಷಣಗಳನ್ನು ತೋರ್ಪಡಿಸುತ್ತಾರೆ. ಕೆಲವು ಮಕ್ಕಳಿಗೆ ವಿಪರೀತ ದೈಹಿಕ ಅಸ್ವಸ್ಥತೆ ಕಂಡು ಬರುತ್ತದೆ. ಇನ್ನು ಕೆಲವರಿಗೆ ತಮ್ಮ ದೇಹದಲ್ಲಿ ರೋಗ - ಲಕ್ಷಣಗಳು ನಿಧಾನವಾಗಿ ಹೆಚ್ಚಾಗುತ್ತ ಹೋಗುತ್ತವೆ. ಈ ಸಮಯದಲ್ಲಿ ದೇಹದಲ್ಲಿ ಉತ್ಪತ್ತಿಯಾಗುವ ಆಂಟಿ ಬಾಡಿಗಳು ತುಂಬಾ ದುರ್ಬಲವಾಗಿ ಕಂಡು ಬರುತ್ತವೆ.

               ದೀರ್ಘಕಾಲದವರೆಗೆ ಹರಡುತ್ತಾರೆ

-ದೊಡ್ಡವರಿಗೆ ಹೋಲಿಸಿದರೆ ಮಕ್ಕಳ ದೇಹದಲ್ಲಿನ ರೋಗ - ಲಕ್ಷಣಗಳು ವೈದ್ಯರಿಗೂ ಸಹ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟ ಎನಿಸುತ್ತದೆ. ರೋಗ - ಲಕ್ಷಣಗಳನ್ನು ತೋರಿಸದೇ ಮಕ್ಕಳು ತಮ್ಮ ಜೊತೆ ಇರುವವರಿಗೆ ಮತ್ತು ತಮ್ಮ ಮನೆಯ ಹಿರಿಯರಿಗೆ ಬಹಳ ದೀರ್ಘ ಕಾಲದವರೆಗೆ ಕೊರೊನಾ ಸೋಂಕನ್ನು ಹರಡಿಸುವಂತಹ ಶಕ್ತಿ ಪಡೆದಿರುತ್ತಾರೆ. -ಆದ್ದರಿಂದ ನಿಮ್ಮ ಮನೆಯ ಮಕ್ಕಳನ್ನು ಸುರಕ್ಷಿತವಾಗಿ ಮತ್ತು ರಕ್ಷಣಾತ್ಮಕವಾಗಿ ಕೊರೊನಾಾ ಲಸಿಕೆ ಬರುವವರೆಗೆ ಮನೆಯಲ್ಲಿ ಇರಿಸಿಕೊಳ್ಳಬೇಕೆಂದು ವಿನಂತಿ ಮಾಡುತ್ತೇವೆ. ಕೋವಿಡ್ - 19 ಬಂದ ನಂತರ ನಿಮ್ಮ ಮಕ್ಕಳು ಸಾಮಾನ್ಯವಾಗಿ ಈ ಕೆಳಗಿನ ರೀತಿ ರೋಗ - ಲಕ್ಷಣಗಳನ್ನು ತೋರಿಸುವರು --ಈ ಹಿಂದಿನ ಸಂಶೋಧನೆಗಳು ಹೇಳುವ ಹಾಗೆ ಮಕ್ಕಳಲ್ಲಿ ಕಂಡು ಬರುವ ಕೋವಿಡ್ - 19 ಪ್ರಕರಣಗಳು ಬಹುತೇಕ ರೋಗ - ಲಕ್ಷಣಗಳು ಇಲ್ಲದಂತೆ ಇರುತ್ತವೆ. ಕೆಲವರಿಗೆ ಸ್ವಲ್ಪ ಹೆಚ್ಚಿಗೆ ಸಮಯದ ನಂತರ ರೋಗ           ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries