HEALTH TIPS

ಬಿಗ್​ ಬಿ ಕುಟುಂಬಕ್ಕೂ ಎದುರಾಯ್ತಾ ಆರ್ಥಿಕ ಸಂಕಷ್ಟ? ಐಷಾರಾಮಿ ಬಂಗಲೆ ಮಾರಿದ ಅಭಿಷೇಕ್​ ಬಚ್ಚನ್​!

            ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಮುಂಬೈನ ವೊರ್ಲಿಯಲ್ಲಿರುವ 37ನೇ ಅಂತಸ್ತಿನ ಅಪಾರ್ಟ್‍ಮೆಂಟ್‍ನನ್ನು ಮಾರಾಟ ಮಾಡಿದ್ದಾರೆ. 45.75 ಕೋಟಿ ರೂಪಾಯಿಗೆ ಈ ಐಷಾರಾಮಿ ಅಪಾರ್ಟ್​ಮೆಂಟ್​ಮಾರಾಟವಾಗಿದೆ.

          ಇದಕ್ಕೆ ಕಾರಣ ಸ್ಪಷ್ಟವಾಗಿಲ್ಲವಾದರೂ ಒಂದರ ಮೇಲೊಂದರಂತೆ ಚಿತ್ರದಲ್ಲಿ ಸೋಲು ಕಾಣುತ್ತಿರುವ ಕಾರಣದಿಂದ ಹಣಕಾಸಿನ ಮುಗ್ಗಟ್ಟು ಉಂಟಾಗಿದ್ದು, ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದೇ ಹೇಳಲಾಗುತ್ತಿದೆ. ತಂದೆ ಬಿಗ್ ಬಿ ಅಮಿತಾಬ್ ಬಚ್ಚನ್, ಪತ್ನಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಬಾಲಿವುಡ್‍ನಲ್ಲಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಸದ್ಯ ಐಶ್ಚರ್ಯ ಅಥವಾ ಅಭಿಷೇಕ್​ ಕೈಯಲ್ಲಿ ಅಂಥದ್ದೇನು ಚಿತ್ರಗಳಲ್ಲಿ. ಅದೂ ಅಲ್ಲದೇ, ಅಭಿಷೇಕ್ ಬಚ್ಚನ್ ಸತತ ಸೋಲುಗಳನ್ನು ಕಾಣುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಅಭಿನಯಿಸಿದ್ದ ಬಿಗ್ ಬುಲ್ ಸಿನಿಮಾ ಕೂಡ ತೋಪೆದ್ದು ಹೋಗಿದೆ.

            ಹೀಗಾಗಿ ಅವರು ತಮ್ಮ ಮನೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಅದರಿಂದ ಬಂದ ಹಣವನ್ನು ಬೇರೆ ಕಡೆ ಹೂಡುವ ಪ್ಲಾನ್ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಈ ಬಂಗಲೆಯನ್ನು ಮದುವೆಯಾದ ಮೂರನೇ ವರ್ಷದ ವಾರ್ಷಿಕೋತ್ಸವಕ್ಕೆ ಅಭಿಷೇಕ್​ ಖರೀದಿ ಮಾಡಿದ್ದರು. 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಹಾಗೂ ಐಶ್ವರ್ಯ ಬಚ್ಚನ್ 2010ರಂದು ಖರೀದಿಸಿದ್ದರು. ಇದೀಗ ಮಾರಾಟ ಮಾಡುತ್ತಿರುವ ಬಗ್ಗೆ ಹಲವಾರು ಊಹಾಪೋಹಗಳು ಅಲೆದಾಡುತ್ತಿದ್ದು, ಬಚ್ಚನ್​ ಕುಟುಂಬ ಇದಕ್ಕೆ ಸ್ಪಷ್ಟ ಉತ್ತರ ಕೊಡಲಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries