HEALTH TIPS

ಕಾಶ್ಮೀರ ಕಣಿವೆಯಲ್ಲಿ ಉಗ್ರರಿಗೆ ಜಾಗವಿಲ್ಲ: ಮೇಜರ್ ಜನರಲ್ ರಶೀಂ ಬಾಲಿ

                 ಶ್ರೀನಗರ: ಭಯೋತ್ಪಾದಕರಿಗೆ ಕಾಶ್ಮೀರ ಕಣಿವೆಯಲ್ಲಿ ಜಾಗವಿಲ್ಲ ಎಂದು ಮೇಜರ್ ಜನರಲ್ ರಶೀಂ ಬಾಲಿ ಹೇಳಿದ್ದಾರೆ.

                ಜಮ್ಮು-ಕಾಶ್ಮೀರದ ಆವಂತಿಪುರ ಬಳಿಯ ನಾಗಬೀರನ್ ಟ್ರಾಲ್ ಪ್ರದೇಶದಲ್ಲಿ ಇಂದು (ಶನಿವಾರ) ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಜೈಷ್-ಎ-ಮೊಹಮ್ಮದ್ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಈ ಉಗ್ರರು ಬಿಜೆಪಿ ನಾಯಕ ರಾಕೇಶ್ ಪಂಡಿತ ಹತ್ಯೆಯಲ್ಲಿ ಶಾಮೀಲಾಗಿದ್ದವರು.

ಎನ್‌ಕೌಂಟರ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಶೀಂ ಬಾಲಿ, 'ಟ್ರಾಲ್ ಪ್ರದೇಶದಲ್ಲಿ ದೀರ್ಘ ಅವಧಿಯಿಂದ ಉಗ್ರರು ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿತ್ತು ಅವರ ಹತ್ಯೆಯೊಂದಿಗೆ ಕಾಶ್ಮೀರ ಕಣಿವೆಯಲ್ಲಿ ಉಗ್ರರಿಗೆ ಜಾಗವಿಲ್ಲ ಎಂಬ ಕಠಿಣ ಸಂದೇಶ ನೀಡಲಾಗಿದೆ' ಎಂದು ಹೇಳಿದ್ದಾರೆ.

             'ಬಿಜೆಪಿ ನಾಯಕ ರಾಕೇಶ್ ಪಂಡಿತ ಹತ್ಯೆಯಲ್ಲಿ ಶಾಮೀಲಾಗಿದ್ದ ಜೈಷ್-ಎ-ಮೊಹಮ್ಮದ್ ಉಗ್ರ ವಕೀಲ್ ಶಾನನ್ನು ಹತ್ಯೆ ಮಾಡಿದ್ದೇವೆ' ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್‌ ಕೂಡ ತಿಳಿಸಿದ್ದಾರೆ.

ಉಗ್ರರಿಂದ 2 ಎಕೆ-47 ಬಂದೂಕುಗಳು, ಒಂದು ಎಸ್‌ಎಲ್‌ಆರ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ವಿಭಾಗ ತಿಳಿಸಿರುವುದಾಗಿ 'ಎಎನ್‌ಐ' ವರದಿ ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries