HEALTH TIPS

ಗೂಗಲ್​ ಶಾಕ್​! ಇನ್ಮುಂದೆ ಈ ಸ್ಮಾರ್ಟ್​ಫೋನ್​ಗಳಲ್ಲಿ ಯೂಟ್ಯೂಬ್, ಇಮೇಲ್ ಸೇರಿ ಇತರೆ ಆಯಪ್​ಗಳ ಕಾರ್ಯ ಸ್ಥಗಿತ ​

        ನವದೆಹಲಿ: ಕೆಲ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಟೆಕ್​ ದೈತ್ಯ ಗೂಗಲ್​​ ಶಾಕಿಂಗ್​ ನ್ಯೂಸ್​ ಒಂದನ್ನು ನೀಡಿದೆ. ಇನ್ಮುಂದೆ 2.3.7 ಅಥವಾ ತುಂಬಾ ಕಡಿಮೆ ವರ್ಷನ್​ನ ಆಯಂಡ್ರಾಯ್ಡ್​ ಮೊಬೈಲ್​ಗಳಲ್ಲಿ ಕೆಲವೊಂದು ಖಾತೆಗಳಿಗೆ ಸೈನ್​ ಇನ್​ ಆಗಲು ಗೂಗಲ್​ ಬೆಂಬಲಿಸುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದ್ದು, ಕೆಲ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಇದು ದುಬಾರಿ ಆಗಲಿದೆ.

         ಈ ನಿಯಮವು ಸೆಪ್ಟೆಂಬರ್​ 27 ರಿಂದ ಜಾರಿಗೆ ಬರಲಿದೆ. ಗೂಗಲ್​ ಬಳಕೆದಾರರಿಗೆ ಕಳುಹಿಸಿದ ಇಮೇಲ್​ನಿಂದ ಈ ವಿಚಾರ ಬಹಿರಂಗವಾಗಿದೆ. ಸೆಪ್ಟೆಂಬರ್​ ನಂತರವೂ ಗೂಗಲ್​ ಆಯಪ್ಸ್​ ಬಳಸುವುದಾದರೆ, ಕನಿಷ್ಟ ಪಕ್ಷ ಆಯಂಡ್ರಾಯ್ಡ್​ 3.0 ಹನಿಕೂಂಬ್​ ವರ್ಸನ್​ಗೆ ಅಪ್​ಡೇಟ್​ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಇಮೇಲ್​ ಸೂಚಿಸಿದೆ.

          ಗೂಗಲ್​ ಈ ನಿಯಮದಿಂದ ಫೋನ್​ ಬ್ರೌಸರ್​ ಮೂಲಕ ಸೈನ್​ ಇನ್​ ಆಗುವ ಜಿಮೇಲ್​, ಗೂಗಲ್​ ಸರ್ಚ್​, ಗೂಗಲ್​ ಡ್ರೈವ್​, ಯೂಟ್ಯೂಬ್​ ಮತ್ತು ಇತರ ಗೂಗಲ್​ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ಆಂಡ್ರಾಯ್ಡ್‌ನ ಅತ್ಯಂತ ಹಳೆಯ ವರ್ಷನ್ ಬಳಕೆದಾರರು ಬಹಳ ಕಡಿಮೆ ಇರಬಹುದು ಮತ್ತು ಗೂಗಲ್ ನಿಸ್ಸಂಶಯವಾಗಿ ಬಳಕೆದಾರರ ಡೇಟಾವನ್ನು ರಕ್ಷಿಸಲು ಮತ್ತು ಖಾತೆಯ ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದೆ.

          ಸೆಪ್ಟೆಂಬರ್​ 27ರ ಆರಂಭದಿಂದ ಆಯಂಡ್ರಾಯ್ಡ್​ 2.3.7 ಮತ್ತು ಅದಕ್ಕಿಂತ ಕಡಿಮೆ ವರ್ಸನ್​ ಸ್ಮಾರ್ಟ್​ ಫೋನ್​ಗಳಲ್ಲಿ ಯಾವುದೇ ಗೂಗಲ್​ ಆಯಪ್ಸ್​ಗೆ ಲಾಗಿನ್​ ಆಗಲು ಪ್ರಯತ್ನಿಸಿದರೆ, 'ಯೂಸರ್​ ನೇಮ್​ ಅಥವಾ ಪಾಸ್​ವರ್ಡ್​ ಎರರ್​' ಎಂಬ ಸಂದೇಶವು ಬರಲಿದೆ. ಹಳೆಯ ಸಾಫ್ಟ್‌ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಕೆಲವು ಬಳಕೆದಾರರಿಗೆ ಈ ಇಮೇಲ್‌ಗಳು ಎಚ್ಚರಿಕೆಯ ಚಿಹ್ನೆಯಾಗಿ ಕಾಣುತ್ತಿವೆ. ತಮ್ಮ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಲು ಅಥವಾ ಫೋನ್‌ಗಳನ್ನು ಬದಲಾಯಿಸಲು ಸೂಚನೆ ನೀಡುವಂತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries