HEALTH TIPS

ಸ್ಕ್ರಾಪೇಜ್ ನೀತಿ ಮಾಲಿನ್ಯ ತಗ್ಗಿಸಲು, ಪರಿಸರ ಸಂರಕ್ಷಿಸಲು ಸಹಾಯ ಮಾಡುತ್ತದೆ: ಪ್ರಧಾನಿ ಮೋದಿ

               ಗಾಂಧಿನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೆಹಿಕಲ್ ಸ್ಕ್ರಾಪೇಜ್ ನೀತಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಸ್ಕ್ರಾಪೇಜ್ ನೀತಿಯು ವಾಹನಗಳನ್ನು ಗುಜರಿಗೆ ಹಾಕುವುದು ಅಯೋಗ್ಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಪರಿಸರಸ್ನೇಹಿ ಮಾದರಿಯಲ್ಲಿ ನಿರ್ಮೂಲನೆ ಮಾಡುವುದಕ್ಕೆ ನೆರವಾಗಲಿದೆ ಎಂದು ಹೇಳಿದ್ದಾರೆ.

        ಗುಜರಾತ್ ನಲ್ಲಿ ನಡೆಯುತ್ತಿರುವ ಇನ್ವೆಸ್ಟರ್ಸ್ ಸಮಿಟ್ ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ನಡೆಸುವ ಮೂಲಕ ಈ ನೂತನ ನೀತಿಯನ್ನು ಪ್ರಧಾನಿ ಮೋದಿಯವರು ಬಿಡುಗಡೆ ಗೊಳಿಸಿದ್ದಾರೆ.

         ವಾಹನ ಸ್ಕ್ರಾಪೇಜ್ ಪಾಲಿಸಿಯನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಈ ನೀತಿಯು ದೇಶದ ನಗರಗಳಲ್ಲಿ ಮಾಲಿನ್ಯವನ್ನು ತಗ್ಗಿಸಲು, ಪರಿಸರವನ್ನು ರಕ್ಷಿಸಲು ಮತ್ತು ಅಭಿವೃದ್ಧಿಯ ವೇಗವನ್ನು ಹೊಂದಲು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ'. ನೀತಿಯು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದ್ದಾರೆ.

         ವಾಹನ ಗುಜರಿಯು ಯೋಗ್ಯವಲ್ಲದ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಪರಿಸರಸ್ನೇಹಿ ರೀತಿಯಲ್ಲಿ ನಿರ್ಮೂಲನೆಗೊಳಿಸಲು ಸಹಾಯ ಮಾಡಲಿದೆ. ಕಾರ್ಯಸಾಧು ವರ್ತುಲ ಆರ್ಥಿಕತೆ ಸೃಷ್ಟಿಸುವುದು ಮತ್ತು ಪರಿಸರೀಯ ಹೊಣೆಗಾರಿಕೆಯೊಂದಿಗೆ ಎಲ್ಲಾ ಪಾಲುದಾರರಿಗೂ ಮೌಲ್ಯ ತಂದುಕೊಡುವುದು ನಮ್ಮ ಗುರಿಯಾಗಿದೆ.

             'ಮೊದಲನೆಯದಾಗಿ, ಹಳೆಯ ಕಾರನ್ನು ಗುಜರಿಗೆ ಹಾಕುವಾಗ ಒಂದು ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಕಾರನ್ನು ಗುಜರಿಗೆ ಹಾಕಿದ ವ್ಯಕ್ತಿಯು ಹೊಸ ಕಾರು ಖರೀದಿಸುವಾಗ ನೋಂದಣಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಅಲ್ಲದೆ, ರಸ್ತೆ ತೆರಿಗೆಯಲ್ಲಿ ರಿಯಾಯಿತಿ ಸಿಗಲಿದೆ. ಎರಡನೆಯದಾಗಿ, ವಾಹನ ಮಾಲೀಕರು ಹಳೆಯ ಕಾರಿನ ನಿರ್ವಹಣೆ ವೆಚ್ಚ, ರಿಪೇರಿ ವೆಚ್ಚ ಮತ್ತು ಇಂಧನ ದಕ್ಷತೆಯ ಮೇಲಿನ ಹಣವನ್ನು ಉಳಿತಾಯ ಮಾಡಲಿದ್ದಾರೆ' ಎಂದು ಸ್ಕ್ರಾಪೇಜ್ ನೀತಿಯ ಅನುಕೂಲತೆಗಳನ್ನು ಅವರು ವಿವರಿಸಿದರು.

         21 ನೇ ಶತಮಾನದಲ್ಲಿ ಭಾರತವು ಸ್ವಚ್ಛ, ದಟ್ಟಣೆ ಮುಕ್ತ ಮತ್ತು ಅನುಕೂಲಕರ ಚಲನಶೀಲತೆಗಾಗಿ ಕೆಲಸ ಮಾಡಬೇಕಿದೆ. ಪ್ರಸ್ತುತ ಬಿಡುಗಡೆಗೊಂಡಿರುವ ಈ ನೀತಿಯು 'ವೇಸ್ಟ್ ಟು ವೆಲ್ತ್' ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ನಮ್ಮ ನಗರಗಳಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಈ ನೀತಿಯು ಚಲನಶೀಲತೆ ಮತ್ತು ಆಟೋ ಸೆಕ್ಟರ್ ನಲ್ಲಿ ಭಾರತಕ್ಕೆ ಹೊಸ ಗುರುತನ್ನು ನೀಡುತ್ತದೆ. ನಮ್ಮ ರಸ್ತೆಗಳಿಂದ ಯೋಗ್ಯವಲ್ಲದ ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ತೆಗೆದುಹಾಕುವಲ್ಲಿಯೂ ಈ ನೀತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.

         ಈ ಬಗ್ಗೆ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲೂ ಬರೆದುಕೊಂಡಿರುವ ಮೋದಿಯವರು, ಯುವಕರು ಮತ್ತು ಸ್ಟಾರ್ಟ್ ಅಪ್‌ ಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೋರಿದ್ದಾರೆ.

ಪರಿಸರ ಸ್ನೇಹಿ ಯೋಜನೆಯ ಭಾಗವಾಗಿ ಈ ಪಾಲಿಸಿಯನ್ನು ಜಾರಿಗೊಳಿಸಲಾಗಿದೆ.            ಕಾರ್ಯಸಾಧ್ಯವಾದ ಸರ್ಕ್ಯುಲರ್ ಎಕಾನಮಿಯನ್ನು ರಚಿಸುವುದು ಇದರ ಪ್ರಧಾನ ಉದ್ದೇಶ. ಪರಿಸರದ ಬಗ್ಗೆ ಎಲ್ಲಾ ಸ್ಟೇಕ್ ಹೋಲ್ಡರ್ಸ್ ಜವಾಬ್ದಾರಿಯಿಂದ ಈ ಪಾಲಿಸಿಯೊಂದಿಗೆ ಕೈ ಜೋಡಿಸಬೇಕು ಎಂದು ಒತ್ತಾಯಿಸಿದ್ದಾರೆ.

           ವಾಹನ ವಾಹನ ಸ್ಕ್ರಾಪೇಜ್ ಪಾಲಿಸಿ ಪರಿಸರವನ್ನು ಸಂರಕ್ಷಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಸ್ಕ್ರ್ಯಾಪಿಂಗ್ ಮೂಲ ಸೌಕರ್ಯವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಜಾಗತಿಕವಾಗಿಯೂ ಈ ಪಾಲಿಸಿ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries