HEALTH TIPS

ಸ್ವಾತಂತ್ರ್ಯೋತ್ಸವ ಪೋಸ್ಟರ್‌ನಿಂದ ನೆಹರು ಚಿತ್ರ ಕೈಬಿಟ್ಟ ಐಸಿಎಚ್‌ಆರ್‌: ಆಕ್ಷೇಪ

                   ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರೂಪಿಸಿರುವ ಡಿಜಿಟಲ್ ಪೋಸ್ಟರ್‌ಗಳಲ್ಲಿ ಜವಾಹರಲಾಲ್‌ ನೆಹರು ಅವರ ಭಾವಚಿತ್ರವನ್ನು ಕೈಬಿಟ್ಟಿರುವ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ಐಸಿಎಚ್‌ಆರ್‌) ಕ್ರಮವನ್ನು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಭಾನುವಾರ ಖಂಡಿಸಿದ್ದಾರೆ.

          'ನೆಹರು ಅವರ ಭಾವಚಿತ್ರವನ್ನು ಕೈಬಿಟ್ಟಿರುವುದಕ್ಕೆ ಐಸಿಎಚ್‌ಆರ್‌ನ ಸದಸ್ಯ ಕಾರ್ಯದರ್ಶಿ ನೀಡಿರುವ ವಿವರಣೆ ಹಾಸ್ಯಾಸ್ಪದವಾಗಿದೆ. ಇಂಥ ವಿವರಣೆ ನೀಡುವ ಬದಲು ಅವರು ತಮ್ಮ ಬಾಯಿ ಮುಚ್ಚಿಕೊಂಡಿರುವುದು ಉತ್ತಮ' ಎಂದೂ ಅವರು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಐಸಿಎಚ್‌ಆರ್‌ನ ಸದಸ್ಯ ಕಾರ್ಯದರ್ಶಿ ದ್ವೇಷ ಹಾಗೂ ಪೂರ್ವಗ್ರಹಕ್ಕೆ ಮಣಿದಿದ್ದಾರೆ' ಎಂದು ಟೀಕಿಸಿದ್ದಾರೆ.

             'ಕಾರು ಸಂಶೋಧನೆಯಾದ ದಿನ ಆಚರಿಸುವ ವೇಳೆ ಹೆನ್ರಿ ಫೋರ್ಡ್‌ ಅವರ ಚಿತ್ರವನ್ನು ಕೈಬಿಡುತ್ತೀರಾ. ವಿಮಾನವನ್ನುಕಂಡು ಹಿಡಿದ ದಿನದ ಸಂಭ್ರಮಾಚರಣೆಗೆ ರೈಟ್‌ ಸಹೋದರರ ಚಿತ್ರವನ್ನು ಕೈಬಿಡುತ್ತೀರಾ' ಎಂದು ಪ್ರಶ್ನಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries