ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಕಾನೂನು ವಿಭಾಗ ವತಿಯಿಂದ '1921ರ ಮಲಬಾರ್ ಹತ್ಯಾಕಾಂಡ-ಸತ್ಯವೂ ಮಿಥ್ಯೆಯೂ'ಎಂಬ ವಿಷಯದಲ್ಲಿ ಸೆ. 15ರಂದು ಬಿಜೆಪಿ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಕೇಸರಿ ಪತ್ರಿಕೆ ಮುಖ್ಯ ವರದಿಗಾರ ಡಾ. ಎನ್. ಆರ್ ಮಧು, ವಕೀಲರಾದ ಶಂಖು ಟಿ.ದಾಸ್, ಕರುಣಾಕರನ್ ನಂಬ್ಯಾರ್ ವಿಷಯ ಮಂಡಿಸಲಿರುವರು.
ಭಾರತದ ಸ್ವಾತಂತ್ರುದ 75ನೇ ವಾರ್ಷಿಕ ಅಂಗವಾಗಿ ನಡೆಯಲಿರುವ ವರ್ಷಪೂರ್ತಿ ಕಾರ್ಯಕ್ರಮದನ್ವಯ ನಡೆಯಲಿರುವ ಜಿಲ್ಲಾಮಟ್ಟದ ಈ ಕಾರ್ಯಕ್ರಮವನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ ಅಬ್ದುಲ್ಲ ಕುಟ್ಟಿ ಉದ್ಘಾಟಿಸುವರು.

