HEALTH TIPS

ಜೂನ್ 16ರಿಂದ ಜುಲೈ 31ರ ಅವಧಿಯಲ್ಲಿ 30 ಲಕ್ಷ ಭಾರತೀಯ ವಾಟ್ಸ್ಯಾಪ್ ಖಾತೆಗಳಿಗೆ ನಿಷೇಧ: ವರದಿ

                ನವದೆಹಲಿ :ಹಾನಿಕಾರಕ ವರ್ತನೆ ಹಾಗೂ ಸ್ಪ್ಯಾಮ್ ತಡೆಯುವ ಉದ್ದೇಶದಿಂದ ವಾಟ್ಸ್ಯಾಪ್ ಈ ವರ್ಷದ ಜೂನ್ 16ರಿಂದ ಜುಲೈ 31ರ ತನಕ 30 ಲಕ್ಷಕ್ಕೂ ಅಧಿಕ ಭಾರತೀಯ ಖಾತೆಗಳನ್ನು ನಿಷೇಧಿಸಿದೆ ಎಂದು ಮಂಗಳವಾರ ಬಿಡುಗಡೆಗೊಳಿಸಲಾದ ಕಂಪೆನಿಯ ಮಾಸಿಕ ಪಾರದರ್ಶಕತೆ ವರದಿಯಲ್ಲಿ ತಿಳಿಸಲಾಗಿದೆ.

           ಭಾರತದ ಹೊಸ ಐಟಿ ನಿಯಮಗಳು 2021ರ ಅನುಸಾರ ವಾಟ್ಸ್ಯಾಪ್ ಬಿಡುಗಡೆಗೊಳಿಸಿದ ಎರಡನೇ ಇಂತಹ ವರದಿ ಇದಾಗಿದೆ. ಭಾರತೀಯ ಖಾತೆಯನ್ನು ಸಂಸ್ಥೆಯು +91 ಫೋನ್ ಸಂಖ್ಯೆಯ ಮೂಲಕ ಗುರುತಿಸುತ್ತದೆ. ನಿಷೇಧಗೊಂಡ ಭಾರತೀಯ ಖಾತೆಗಳ ಪೈಕಿ ಶೇ95ಕ್ಕೂ ಅಧಿಕ ಖಾತೆಗಳು ಅನಧಿಕೃತವಾಗಿ ಆಟೊಮೇಟೆಡ್ ಅಥವಾ ಬಲ್ಕ್ ಮೆಸೇಜಿಂಗ್ ಬಳಸಿವೆ. ಜಾಗತಿಕವಾಗಿ ಹೇಳುವುದಾದರೆ ಮಾಸಿಕ ಸುಮಾರು 80 ಲಕ್ಷ ಖಾತೆಗಳು ನಿಷೇಧಗೊಳಗಾಗುತ್ತವೆ.

              ಮೇಲೆ ತಿಳಿಸಿದ ಅವಧಿಯಲ್ಲಿ ನಿಷೇಧ ಮನವಿ, ಉತ್ಪನ್ನ ಬೆಂಬಲ, ಖಾತೆ ಬೆಂಬಲ, ಸುರಕ್ಷತಾ ಬೆಂಬಲಕ್ಕೆ ಸಂಬಂಧಿಸಿದಂತೆ 594 ದೂರುಗಳು ಬಳಕೆದಾರರಿಂದ ಬಂದಿವೆ ಹಾಗೂ ಇವುಗಳ ಪೈಕಿ 74 ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ, ಈ 74 ಪ್ರಕರಣಗಳ ಪೈಕಿ 73 ಖಾತೆ ನಿಷೇಧಕ್ಕೆ ಸಂಬಂಧಿಸಿದ ಅಪೀಲುಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries