HEALTH TIPS

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದಲ್ಲಿ 9/11 ನಂತಹ ದಾಳಿ ಘಟನೆಗಳಿಗೂ ಪರಿಹಾರಗಳಿವೆ: ಪ್ರಧಾನಿ ಮೋದಿ

         ನವದೆಹಲಿ: 1893ರಲ್ಲಿ ಸ್ವಾಮಿ ವಿವೇಕಾನಂದರ ಅವರು ಚಿಕಾಗೋದಲ್ಲಿ ಮಾಡಿದ್ದ ಭಾಷಣದಲ್ಲಿ 9/11ದಂತದ ದಾಳಿ ಘಟನೆಗಳಿಗೂ ಶಾಶ್ವತ ಪರಿಹಾರಗಳಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
         ಅಹ್ಮದಾಬಾದ್ ನ ಸರ್ದಾರ್ ಧಾಮ್ ಭವನವನ್ನು ಉದ್ಘಾಟಿಸಿ ಮಾತನಾಡಿರುವ ಅವರು, 9/11 ದಿನ ಇದು. ವಿಶ್ವದ ಇತಿಹಾಸದಲ್ಲಿ ಮಾನವೀಯತೆಯ ಮೇಲೆ ನಡೆದ ದಾಳಿ ಎಂದು ಈ ದಿನವನ್ನು ನೆನಪಿಸಿಕೊಳ್ಳಲಾಗುತ್ತದೆ. ಆದರೆ, ಇದೇ ದಿನಾಂಕವು ಮಾನವೀಯ ಮೌಲ್ಯಗಳ ಬಗ್ಗೆಯೂ ನಮಗೆ ಪಾಠ ಕಲಿಸಿದೆ ಎಂದು ಹೇಳಿದ್ದಾರೆ. 
        ಸೆಪ್ಟೆಂಬರ್ 11 ನಮಗೆ ಅತ್ಯಂತ ಮುಖ್ಯವಾದ ದಿನ ಕೂಡ ಹೌದು, ಏಕೆಂದರೆ, 1893ರಲ್ಲಿ ಇದೇ ದಿನ ಸ್ವಾಮಿ ವಿವೇಕಾನಂದ ಅವರು ಚಿಕಾಗೋದಲ್ಲಿ ಐಸಿಹಾಸಿಕ ಭಾಷಣ ಮಾಡಿದ ದಿನವಾಗಿದೆ. ಭಾಷಣದಲ್ಲಿ ವಿವೇಕಾನಂದ ಅವರು ಮಾನವೀಯತೆ ಮೌಲ್ಯಗಳ ಬಗ್ಗೆ ಇಡೀ ವಿಶ್ವಕ್ಕೆ ಪಾಠ ಹೇಳಿದ್ದರು. 9/11 ಭಯೋತ್ಪಾದಕ ದಾಳಿಯಂತಹ ಘಟನೆಗಳಿಗೆ ಈ ಬೋಧನೆಗಳು ಶಾಶ್ವತ ಪರಿಹಾರಗಳನ್ನು ನೀಡುತ್ತವೆ ಎಂದು ಇಡೀ ವಿಶ್ವ ಅರಿತುಕೊಂಡಿದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries