ಕಾಸರಗೋಡು: ಕೋವಿಡ್ ಅವಧಿಯ ಹಿನ್ನೆಲೆಯನ್ನು ಪರಿಗಣಿಸಿ ಶಿಕ್ಷಣ ಕ್ಷೇತ್ರವು ಮುಂದುವರೆಯಬೇಕು ಮತ್ತು ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ವಿವಿಧ ಯೋಜನೆಗಳ ಮೂಲಕ ಪೂರ್ಣಗೊಂಡಿರುವ ಶಾಲಾ ಕಟ್ಟಡಗಳು, ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳ ಉದ್ಘಾಟನೆಯನ್ನು ಆನ್ ಲೈನ್ ಮೂಲಕ ನಿನ್ನೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಶಾಲೆಗಳು ಆರಂಭಗೊಳ್ಳುವ ಹಂತದಲ್ಲಿದ್ದು, ಈ ವೇಳೆ ಶಾಲೆಗಳು ಸುಸಜ್ಜಿತವಾಗಿರಬೇಕು. ಕೇರಳದ ಶಾಲೆಗಳು ತಮ್ಮ ಶೈಕ್ಷಣಿಕ ಉತ್ಕøಷ್ಟತೆಯ ಭಾಗವಾಗಿ ಈಗಾಗಲೇ ಚುರುಕಾಗಿವೆ. ಕೋವಿಡ್‍ನಲ್ಲಿ ಡಿಜಿಟಲ್ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಡಿಜಿಟಲ್ ಶಿಕ್ಷಣದ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಪರ್ಕವನ್ನು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ. ಡಿಜಿಟಲ್ ಉಪಕರಣಗಳು ಮತ್ತು ಪಠ್ಯಪುಸ್ತಕಗಳನ್ನು ಬಡ ಮಕ್ಕಳಿಗೆ ಲಭ್ಯವಾಗುವಂತೆ ಮಾಡಲು ಕ್ರಮಗಳನ್ನು ಬಹುತೇಕ ನಿಭಾಯಿಸಲಾಗಿದೆ ಎಂದರು.
ಕೇರಳದ ಎಲ್ಲಾ ಶಾಲೆಗಳು ಸಮಾನತೆಯ ಉತ್ಕೃಷ್ಟತೆಯ ಕೇಂದ್ರಗಳಾಗಿರಬೇಕು. ಮೂಲಸೌಕರ್ಯ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಬೇಕು. ಇದರಿಂದ ಮಕ್ಕಳು ಅದರ ಪ್ರಯೋಜನಗಳನ್ನು ಅನುಭವಿಸಬಹುದು. ಇದರ ಭಾಗವಾಗಿ, ಶಿಕ್ಷಕರು ಸಹ ಹೊಸ ಮಿಷನ್ ನ್ನು ನಿರ್ವಹಿಸಲು ಸಿದ್ಧರಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ರಕ್ಷಣೆ ಯಜ್ಞದ ಭಾಗವಾಗಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳು ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಕ್ರಮದ ಗಂಭೀರತೆಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ಸಾರ್ವಜನಿಕ ಶಿಕ್ಷಣ ಸಚಿವ ವಿ.ಶಿವಂ ಕುಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


