ಕಾಸರಗೋಡು: ದೀನ ದಲಿತರ, ರೋಗಿಗಳ ಸೇವೆಯಲ್ಲಿ ಕಳೆದ ಎರಡು ದಶಕಗಳಿಂದ ಕಾಸರಗೋಡಿನಲ್ಲಿ ತೊಡಗಿಕೊಂಡಿರುವ ದೀನ ಬಂಧು ಚಾರಿಟೇಬಲ್ ಸೊಸೈಟಿಯು ಸೇವಾ ಭಾರತೀಯ ನೇತೃತ್ವದಲ್ಲಿ ಕಳೆದ 12 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಅನ್ನದಾನ, ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಆ್ಯಂಬುಲೆನ್ಸ್ ಸೇವೆ, ನಿರಾಶ್ರಿತರ ಸೇವೆಯಲ್ಲಿ ತೊಡಗಿಕೊಂಡಿದೆ.
ಇದರ ಸೇವಾ ಯೋಜನೆಯನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಲು ಹೊರಟಿರುವ ಕಟ್ಟಡದ ಪೂರ್ವಭಾವಿ ಭೂಮಿ ಪೂಜೆ ಕಾರ್ಯಕ್ರಮ ಕಾಸರಗೋಡಿನಲ್ಲಿ ನೆರವೇರಿತು. ಕಾಸರಗೋಡು ಸಿಪಿಸಿಆರ್‍ಐ ಮುಂಭಾಗದಲ್ಲಿ ನೂತನವಾಗಿ ಖರೀದಿಸಿದ ಭೂಮಿಯಲ್ಲಿ ಬ್ರಹ್ಮಶ್ರೀ ಕಾವು ವಿಷ್ಣು ಪ್ರಕಾಶ ಪಠೇರಿ ಪೂಜಾ ಕಾರ್ಯ ನೆರವೇರಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಂಘ ಚಾಲಕ ಗೋಪಾಲ ಚಟ್ಟಿಯಾರ್ ನೂತನ ಸೇವಾ ಯೋಜನೆಯ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು. ಸೇವಾ ಭಾರತಿ ಗೌರವಾಧ್ಯಕ್ಷ ಸಿ.ವಿ.ಪೆÇದುವಾಳ್ ಅಧ್ಯಕ್ಷತೆ ವಹಿಸಿದರು. ಆರ್‍ಎಸ್‍ಎಸ್ ನಗರ ಸಂಘ ಚಾಲಕ ಕೆ.ಟಿ.ಕಾಮತ್, ಹಿರಿಯ ಸಮಾಜ ಸೇವಕಿ ಪ್ರೇಮಾ ಎಲ್ಲೋಜಿ ರಾವ್, ಕಾಸರಗೋಡು ನಗರಸಭಾ ಸದಸ್ಯರಾದ ಪಿ.ರಮೇಶ್, ವರಪ್ರಸಾದ್ ಕೋಟೆಕಣಿ, ಶ್ರೀಲತಾ ಟೀಚರ್, ವೀಣಾ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ, ಬಿಜೆಪಿ ನೇತಾರರಾದ ಹರೀಶ್ ನಾರಂಪಾಡಿ, ಗುರುಪ್ರಸಾದ್, ಉಮೇಶ್ ಕಡಪ್ಪರ, ಸೇವಾ ಭಾರತಿ ಅಧ್ಯಕ್ಷ ನ್ಯಾಯವಾದಿ ಸುರೇಶ್, ಎ.ನಾರಾಯಣ, ಮನೀಷ್ ಮೊದಲಾದವರು ಉಪಸ್ಥಿತರಿದ್ದರು.
ಸೇವಾ ಭಾರತೀಯ ಸಲಹೆಗಾರರಾದ ಪುಂಡರೀಕಾಕ್ಷ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಪ್ರಭಾಕರ ಮಾಸ್ತರ್ ಮುಳ್ಳೇರಿಯ ಸ್ವಾಗತಿಸಿ, ಕಾರ್ಯದರ್ಶಿ ಕೆ.ಜಗದೀಶ್ ಕೂಡ್ಲು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.





